alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ಣಂಚನ್ನು ತೇವಗೊಳಿಸುತ್ತೆ ತಾಯಿ-ಮಗಳ ಈ ಸ್ಟೋರಿ

ಈ ಸ್ಟೋರಿ ಓದುಗರ ಮನ ಕಲಕುತ್ತೆ. ತಾಯಿಯೊಬ್ಬಳು ಮಗಳ ಮದುವೆ ಸಂದರ್ಭದಲ್ಲಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸುತ್ತಾಳೆ. ಆದರೆ ಮಗಳಿಗೆ ಗಿಫ್ಟ್ ಕೊಡುವುದನ್ನ ಆ ತಾಯಿ ಮರೆತಿರಲಿಲ್ಲ.

ಮಗಳ ಕಾಲಿನ ಶೂಸ್ ಗಳನ್ನ ತಾಯಿ ಗಿಫ್ಟ್ ನೀಡಿರುತ್ತಾಳೆ. ಆ ಶೂಸಿನ ಕೆಳಭಾಗದ ಸೋಲ್ ನಲ್ಲಿ ಬರವಣಿಗೆಯನ್ನೂ ಕೆತ್ತಿಸಿದ್ದಳು ಆ ತಾಯಿ. ಸುಂದರವಾದ ದಿನದಂದು ನಿನ್ನನ್ನು ಎಲ್ಲರೂ ಪ್ರೀತಿಯಿಂದ ಆಶೀರ್ವದಿಸಲಿ. ಈ ಶುಭ ಸಂದರ್ಭದಲ್ಲಿ ಈ ಶೂಸ್ ನ್ನ ನಾನು ನಿನಗೆ ಗಿಫ್ಟ್ ಆಗಿ ಕೊಡುತ್ತಿದ್ದೇನೆ ಎಂದು.

ಈ ಘಟನೆ ಯುನೈಟೆಡ್ ಕಿಂಗ್ ಡಂನಲ್ಲಿ ನಡೆದಿದೆ. ಇಂತಹ ಭಾವನಾತ್ಮಕ ಪದಗಳನ್ನ ಬಳಸಿರುವುದನ್ನ ಮಗಳು ಎಮ್ಮಾ ನೆನೆದು ಕಣ್ಣೀರಿಟ್ಟಿದ್ದಾಳೆ. ತಾಯಿಯ ಗಿಫ್ಟ್ ತನಗೆ ಈ ರೀತಿ ತಲುಪಬಹುದೆಂದು ಆಕೆ ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ.

2016 ರಲ್ಲಿ ನಿಶ್ಚಿತಾರ್ಥಗೊಂಡ ಎಮ್ಮಾ ಇತ್ತೀಚೆಗೆ ಮದುವೆ ಆಗಿದ್ದಾಳೆ. ಮದುವೆಗೂ ಸ್ವಲ್ಪ ದಿನಗಳ ಮೊದಲು ಎಮ್ಮಾಳ ತಾಯಿ ಕಾನ್ಸರ್ ನಿಂದ ಸಾವನ್ನಪ್ಪಿದ್ದಾರೆ. ಆದರೆ ಸಾಯೋದಕ್ಕೂ ಮೊದಲು ಆ ತಾಯಿ ಎಮ್ಮಾಳಿಗೆ ಪತ್ರ ಬರೆದಿದ್ದು, ತಡವಾಗಿ ಆ ಪತ್ರ ಆಕೆ ಕೈ ಸೇರಿದೆ.

ಸಾವನ್ನಪುವ ಮುನ್ನ ಆನ್ ಲೈನ್ ಶಾಪ್ ನಲ್ಲಿ ಈ ಶೂಸ್ ಗಳನ್ನ ಖರೀದಿಸಿ ಸೋಲ್ ಗೆ ಭಾವನಾತ್ಮಕವಾದ ಸಾಲುಗಳನ್ನ ಬರೆಸಿರುತ್ತಾಳೆ. ಆನ್ ಲೈನ್ ಶಾಪ್ ನವ ಎಮ್ಮಾಳ ತಾಯಿ, ಮಗಳಿಗೆ ನೀಡಿದ ಶೂಸ್ ಮತ್ತು ಸೋಲ್ ಮೇಲೆ ಬರೆದ ವಾಕ್ಯಗಳ ಪೋಟೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ. ಈ ಫೋಟೋಗಳಿಗೆ ಸಾಕಷ್ಟು ಭಾವನಾತ್ಮಕ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ.

A pretty emotional pair of shoes:This client put a deposit down on shoes months ago. In the meantime and unbeknown to…

Posted by Lace and Love on Monday, March 11, 2019

Subscribe Newsletter

Get latest updates on your inbox...

Opinion Poll

  • ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಶಸ್ಸು ಕಾಣಲಿದೆಯಾ ಕಾಂಗ್ರೆಸ್-ಜೆಡಿಎಸ್ ಮೈತ್ರಿ?

    View Results

    Loading ... Loading ...