alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಬಾನಿ ಕಂಪೆನಿ ಆಯ್ಕೆ ಮಾಡದೆ ಡಸಾಲ್ಟ್ ಗೆ ಬೇರೆ ಆಯ್ಕೆಯೇ ಇರಲಿಲ್ಲ…!

ಡಸಾಲ್ಟ್ ಏವಿಯೇಶನ್‌ನ ಆಂತರಿಕ ದಾಖಲೆಯ ಪ್ರಕಾರ, ರಫೇಲ್ ಡೀಲ್‌ನಲ್ಲಿ ಮುಖ್ಯ ಆಫ್‌ಸೆಟ್ ಪಾಲುದಾರನಾಗಿ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಡಿಫೆನ್ಸ್ ಅನ್ನೇ ಆಯ್ಕೆ ಮಾಡದೆ ಬೇರೆ ದಾರಿಯೇ ಇರಲಿಲ್ಲ ಎಂದು ಫ್ರೆಂಚ್ ಮಾಧ್ಯಮದ ವೆಬ್‌ಸೈಟ್ ಹೇಳಿಕೊಂಡಿದೆ.

ಭಾರತ ಸರ್ಕಾರವೇ ರಿಲಯನ್ಸ್ ಅನ್ನು ಸೂಚಿಸಿತ್ತು ಎಂಬ ಫ್ರಾನ್ಸ್ ನ ಮಾಜಿ ಅಧ್ಯಕ್ಷ ಫ್ರಾಂಕೋಸಿಸ್ ಹಾಲಂಡ್ ಅವರ ಮಾತನ್ನು ಕಳೆದ ತಿಂಗಳು ಈ ಫ್ರೆಂಚ್ ತನಿಖಾ ವೆಬ್‌ಸೈಟ್ ಮೀಡಿಯಾಪಾರ್ಟ್ ಪ್ರಕಟಿಸಿತ್ತು. ಇದೀಗ ಡಸಾಲ್ಟ್ ನ ಕಡತವೂ ಇದನ್ನೇ ಹೇಳುತ್ತಿದೆ ಎಂದು ವರದಿ ಮಾಡಿದೆ.

ಮೀಡಿಯಾ ಪಾರ್ಟ್ ವರದಿ ಪ್ರಕಾರ, 36 ಜೆಟ್ ಯುದ್ಧ ವಿಮಾನಗಳ 59,000 ಕೋಟಿ ರೂ. ಮೌಲ್ಯದ ಡೀಲ್ ಕುದುರಿಸಲು ರಾಜಿ ವಿನಿಮಯವಾಗಿ ಡಸಾಲ್ಟ್, ಅಂಬಾನಿಯ ರಿಲಯನ್ಸ್ ಅನ್ನು ಒಪ್ಪಿಕೊಂಡಿತು, ಅದು ಕಡ್ಡಾಯವಾಗಿತ್ತು. ನಾಗ್ಪುರದಲ್ಲಿರುವ ಕಂಪನಿಯ ಉಸ್ತುವಾರಿ, ಡೆಸಾಲ್ಟ್ ನ ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಕ್ ಸೆಗಾಲೆನ್ ಅವರ ಮಾತನ್ನೂ ಈ ವೆಬ್‌ಸೈಟ್ ಉಲ್ಲೇಖಿಸಿದೆ. ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ 3 ದಿನಗಳ ಫ್ರಾನ್ಸ್ ಪ್ರವಾಸ ಆರಂಭವಾಗುವ ಹೊತ್ತಲ್ಲೇ ಈ ವರದಿ ಪ್ರಕಟವಾಗಿದೆ.

ಈ ಹಿಂದೆ, ಈ ವೆಬ್‌ಸೈಟ್ ಪ್ರಕಟಿಸಿದ್ದ ತನ್ನ ಹೇಳಿಕೆಯಿಂದ ಹಾಲಂಡ್ ಅಂತರ ಕಾಯ್ದುಕೊಂಡಿದ್ದರು. ಈ ವಿಷಯ ಕುರಿತಂತೆ ಡೆಸಾಲ್ಟ್ ಕಂಪನಿಯಷ್ಟೇ ಸರಿಯಾದ ಉತ್ತರ ನೀಡಲು ಸಾಧ್ಯ ಎಂದು ಹೇಳಿಕೊಂಡಿದ್ದರು. ಫ್ರಾನ್ಸ್ ಸರ್ಕಾರ ಹಾಗೂ ಡೆಸಾಲ್ಟ್ ಕಂಪನಿ, ಎರಡೂ ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡಿದ್ದ ಹಾಲಂಡ್ ಹೇಳಿಕೆಯನ್ನು ತಿರಸ್ಕರಿಸಿದ್ದವು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...