alex Certify
ಕನ್ನಡ ದುನಿಯಾ       Mobile App
       

Kannada Duniya

8 ಅಡಿಯ ಫ್ರಿಡ್ಜ್ ಏರಿದ್ದಾಳೆ 2 ವರ್ಷದ ಬಾಲೆ…!

ಈಗಿನ ಕಾಲದ ಮಕ್ಕಳು ಬಲು ಬುದ್ದಿವಂತರು. ಸ್ವಸಾಮರ್ಥ್ಯದಿಂದ ತಮಗೆ ಬೇಕಾಗಿದ್ದನ್ನು ದಕ್ಕಿಸಿಕೊಳ್ಳಬಲ್ಲ ಜಾಣರು. ಇದಕ್ಕೆ ಪುಷ್ಟಿ ನೀಡುವಂತೆ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಸಾಲಿಗೆ ಈಗ ಮತ್ತೊಂದು ವಿಡಿಯೋ ಸೇರ್ಪಡೆಯಾಗಿದೆ.

ತನಗೆ ಬೇಕಾಗಿದ್ದ ಪೆನ್ ಒಂದು 8 ಅಡಿ ಉದ್ದದ ಫ್ರಿಡ್ಜ್ ಮೇಲಿದ್ದ ವೇಳೆ 2 ವರ್ಷದ ಪುಟ್ಟ ಬಾಲೆಯೊಬ್ಬಳು ಕಷ್ಟಪಟ್ಟು ಫ್ರಿಡ್ಜ್ ಏರಿ ಪೆನ್ ತೆಗೆದುಕೊಂಡಿದ್ದಾಳೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ.

ಸೇಂಟ್ ಜಾರ್ಜ್ ನ ತಾನಲಿ ಆಲಿವರ್ ಎಂಬಾಕೆಯ ಪುತ್ರಿ ಎರಡು ವರ್ಷದ ಸ್ಕೇರ್ಲೆಟ್ ಆಲಿವರ್ ಈ ಸಾಹಸ ಮಾಡಿದ್ದು, ಆಕೆ ಫ್ರಿಡ್ಜ್ ಏರಿದ್ದನ್ನು ಕಂಡ ತಾನಲಿ ಆಲಿವರ್ ಮತ್ತೊಮ್ಮೆ ಏರಲು ಹೇಳಿದ ವೇಳೆ ಮೊದಲಿಗಿಂತ ವೇಗವಾಗಿ ಹತ್ತಿದ್ದಾಳೆ. ಇದನ್ನು ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿದ ತಾನಲಿ ಆಲಿವರ್, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...