alex Certify
ಕನ್ನಡ ದುನಿಯಾ       Mobile App
       

Kannada Duniya

ಒಂಬತ್ತು ಅಂತಸ್ತಿನ ಕಟ್ಟಡ ಏರಿದ‌ ಸ್ಪೈಡರ್ ರಕ್ಕೂನ್

ಬಹುತೇಕರು ಸ್ಪೈಡರ್ ಮ್ಯಾನ್ ಚಿತ್ರದಲ್ಲಿ ಅಥವಾ ಗೇಮಿಂಗ್ ನಲ್ಲಿ ಕಟ್ಟಡದಿಂದ ಕಟ್ಟಡಕ್ಕೆ ಹಾರುವ ಸ್ಪೈಡರ್ ಮ್ಯಾನ್ ನೋಡಿರಬಹುದು‌. ಆದರೀಗ ರಕ್ಕೂನ್ ಎಂಬ ಪ್ರಾಣಿ ಈ ಸಾಹಸ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ‌ ವೈರಲ್ ಆಗಿದೆ.

ನ್ಯೂಜೆರ್ಸಿಯಲ್ಲಿ ಈ‌ ಪ್ರಾಣಿ, 9 ಅಂತಸ್ತಿನ ಕಟ್ಟಡವನ್ನು ಯಾವುದೇ ಸಹಾಯವಿಲ್ಲದೇ ಗೋಡೆಗಳ ಮೇಲೆ ತೆವಳುತ್ತ ಏರಿ, ಎಡಬಲಕ್ಕೆ ಓಡಾಡುವ ಮೂಲಕ ಎಲ್ಲರಿಗೆ ಅಚ್ಚರಿ ಮೂಡಿಸಿದೆ. ಈ ರೀತಿ ಮಾಡಿರುವ ರಕ್ಕೂನ್ ಬಿದ್ದರೆ ಜೀವಕ್ಕೆ ಅಪಾಯವೆಂದು ಕೆಲವರು ನೋಡಿದರೆ, ಇನ್ನು ಕೆಲವರು ಪ್ರಾಣಿಯ ಚೇಷ್ಟೆ ನೋಡಿ ಎಂಜಾಯ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕೆಲವರು ಈ ಸಸ್ತನಿಯ ಸಾಹಸದ ವಿಡಿಯೋ ಹಾಕುತ್ತಿದ್ದಂತೆ, ರಾತ್ರೋರಾತ್ರಿ ಸಾಮಾಜಿಕ ಜಾಲತಾಣಗಳ ಹಾಗೂ ಮಾಧ್ಯಮಗಳ ಸ್ಟಾರ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...