alex Certify
ಕನ್ನಡ ದುನಿಯಾ       Mobile App
       

Kannada Duniya

29 ನೇ ವಯಸ್ಸಿನಲ್ಲೇ 2500 ಮಹಿಳೆಯರ ಜೊತೆ ಮಲಗಿದ್ದಾನೆ ಈ ಭೂಪ

ಫೋಟೋದಲ್ಲಿರುವ ಈತ ಡೇನಿಯಲ್ ವ್ಯಾಗ್ಸ್ಟರ್. ಬ್ರಿಟನ್ ಮೂಲದ ವ್ಯಕ್ತಿ ಸಾಮಾನ್ಯನಲ್ಲ. 29 ವರ್ಷದಲ್ಲಿಯೇ 2500 ಹುಡುಗಿಯರ ಜೊತೆ ಸಂಬಂಧ ಬೆಳೆಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಈಗ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ.

ಡೇನಿಯಲ್ ಜೈಲು ಸೇರಿರೋದು ಸಂಬಂಧ ಬೆಳೆಸಿದ್ದಕ್ಕಾಗಿಯಲ್ಲ. ಡೇನಿಯಲ್ ಜುಲೈ 2016 ರಲ್ಲಿ ಹೈ-ಫೈ ರೆಸ್ಟೋರೆಂಟ್ ಒಂದಕ್ಕೆ ಹೋಗಿದ್ದ. ಆತನ ಜೊತೆ ಆತನ ಸ್ನೇಹಿತರೂ ಇದ್ದರು. ಅಲ್ಲಿ ನಾಲ್ಕು ಬಾಟಲ್ ಷಾಂಪೆನ್ ಕುಡಿದಿದ್ದಲ್ಲದೆ 6 ಗಂಟೆಗಳ ಕಾಲ ಎಂಜಾಯ್ ಮಾಡಿದ್ದಾನೆ.

ಈತ ಕುಡಿದು-ತಿಂದಿದ್ದೆಲ್ಲ ಸೇರಿ 40 ಸಾವಿರ ರೂಪಾಯಿ ಬಿಲ್ ಬಂದಿದೆ. ಬಿಲ್ ನೋಡ್ತಿದ್ದಂತೆ ಮಾತು ಬದಲಿಸಿದ ಡೇನಿಯಲ್ ಹೊಟೇಲ್ ಊಟ ಚೆನ್ನಾಗಿರಲಿಲ್ಲ. ತುಂಬಾ ಲೇಟಾಗಿ ಸರ್ವ್ ಮಾಡ್ತಿದ್ದರು. ನಾನು ಬಿಲ್ ನೀಡೋದಿಲ್ಲ ಎನ್ನುತ್ತ ಹೊಟೇಲ್ ನಿಂದ ಹೊರಗೆ ಬಂದಿದ್ದ.

ವಿಚಾರಣೆ ನಂತ್ರ ಕೋರ್ಟ್ ಡೇನಿಯಲ್ ಗೆ 2 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಸೂಕ್ತ ಸಾಕ್ಷಿ ಸಿಕ್ಕ ಮೇಲೆ ಕೋರ್ಟ್ ಡೇನಿಯಲ್ ನನ್ನು ಜೈಲಿಗೆ ತಳ್ಳಿದೆ. ಇದಕ್ಕೂ ಮುನ್ನ ಡೇನಿಯಲ್ 50 ಮಹಿಳೆಯರಿಗಾಗಿ ನನ್ನ ಗರ್ಲ್ ಫ್ರೆಂಡ್ ಮುಂದೆ ಸುಳ್ಳು ಹೇಳಿದ್ದೇನೆಂದು ಒಪ್ಪಿಕೊಂಡಿದ್ದಾನೆ.

ಡೇನಿಯಲ್ ಈವರೆಗೆ 2500 ಹುಡುಗಿಯರ ಜೊತೆ ಮಲಗಿದ್ದಾನಂತೆ. ವಾರಕ್ಕೆ ನಾಲ್ಕರಿಂದ ಐದು ಹುಡುಗಿಯರು ಆತನಿಗೆ ಬೇಕಂತೆ. ಹೊಟೇಲ್ ರೂಮಿನಲ್ಲಿ 24 ಗಂಟೆಯಲ್ಲಿ ನಾಲ್ವರ ಜೊತೆ ಸಂಬಂಧ ಬೆಳೆಸಿದ್ದೆ ಎಂಬುದನ್ನು ಡೇನಿಯಲ್ ಒಪ್ಪಿಕೊಂಡಿದ್ದಾನೆ. ಸೆಕ್ಸ್ ವೇಳೆ ಕಾಂಡೋಮ್ ಬಳಸದ ಡೇನಿಯಲ್ ಅದು ಕಿರಿಕಿರಿಯುಂಟು ಮಾಡುತ್ತೆ ಎನ್ನುತ್ತಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...