alex Certify
ಕನ್ನಡ ದುನಿಯಾ       Mobile App
       

Kannada Duniya

ಈ ನಟ ಪಡೆಯುತ್ತಿರುವ ಸಂಭಾವನೆ ಕೇಳಿದರೆ ದಂಗಾಗ್ತೀರಾ!

ಜೇಮ್ಸ್ ಬಾಂಡ್ ಸರಣಿಯ 25 ನೇ ಚಿತ್ರ ಸೆಟ್ಟೇರುತ್ತಿದ್ದು, 2019 ರ ನವೆಂಬರ್ ನಲ್ಲಿ ಚಿತ್ರ ಬಿಡುಗಡೆ ಮಾಡಲು ಪ್ಲಾನ್ ಮಾಡಲಾಗಿದೆ.

ಡೇನಿಯಲ್ ಕ್ರೇಗ್ ಜೇಮ್ಸ್ ಬಾಂಡ್ 007  ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದಕ್ಕಾಗಿ ಬರೋಬ್ಬರಿ 50 ಮಿಲಿಯನ್ ಪೌಂಡ್ ಅಂದರೆ ಅಂದಾಜು 450 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ.

2015 ರಲ್ಲಿ ತೆರೆಕಂಡ ಸ್ಪೆಕ್ಟ್ರಾ ಚಿತ್ರಕ್ಕಾಗಿ ಡೇನಿಯಲ್ ಕ್ರೇಗ್ 37 ಮಿಲಿಯನ್ ಪೌಂಡ್ ಸಂಭಾವನೆ ಪಡೆದಿದ್ದು, ಇದೀಗ 50 ಮಿಲಿಯನ್ ಪೌಂಡ್ ಪಡೆಯುವ ಮೂಲಕ ವಿಶ್ವದ ಅತ್ಯಂತ ದುಬಾರಿ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಆಸ್ಕರ್ ಪ್ರಶಸ್ತಿ ವಿಜೇತ ಡ್ಯಾನಿ ಬೋಯ್ಲ್, ಬಾಂಡ್ ಸರಣಿಯ ಹೊಸ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಡಿಸೆಂಬರ್ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...