alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಸ್ತಿ ಇಂಟರ್ ನೆಟ್ ಬಳಸ್ತಿರಾ…? ಹಾಗಾದ್ರೆ ಕಾದಿದೆ ಅಪಾಯ

net-net

ಕಂಪ್ಯೂಟರ್, ಮೊಬೈಲ್ ಬಳಕೆದಾರರ ಸಂಖ್ಯೆ ಅದರಲ್ಲಿಯೂ, ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆ ಹೆಚ್ಚಿದಂತೆಲ್ಲಾ ಇಂಟರ್ ನೆಟ್ ಬಳಸುವವರ ಪ್ರಮಾಣವೂ ಗಣನೀಯವಾಗಿ ಹೆಚ್ಚಾಗಿದೆ.

ಇತ್ತೀಚೆಗೆ ಮೊಬೈಲ್ ಸೇವಾ ಕಂಪನಿಗಳು ನಡೆಸುತ್ತಿರುವ ಪೈಪೋಟಿಯಿಂದಾಗಿ ಗ್ರಾಹಕರಿಗೆ ಅನುಕೂಲವಾಗಿದೆ. ಈ ಅನುಕೂಲದ ಬೆನ್ನಲ್ಲೇ ಅನಾನುಕೂಲವೂ ಇದೆ ಎಂಬುದಂತೂ ನಿಜ. ಅತಿಯಾದ ಪ್ರಮಾಣದಲ್ಲಿ ಇಂಟರ್ ನೆಟ್ ಬಳಸುವುದರಿಂದ ಅಡ್ಡ ಪರಿಣಾಮ ಉಂಟಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇತ್ತೀಚೆಗಂತೂ ಯುವಕರು, ಮಕ್ಕಳು ಅಷ್ಟೇ ಏಕೆ ದೊಡ್ಡವರು ಕೂಡ ಇಂಟರ್ ನೆಟ್ ದಾಸರಾಗಿದ್ದಾರೆ.

ಸಾಮಾಜಿಕ ಜಾಲತಾಣ, ಬ್ಲಾಗಿಂಗ್, ಗೇಮ್ ಸೇರಿದಂತೆ ಅನೇಕ ಕಾರಣಗಳಿಗೆ ನೆಟ್ ಬಳಕೆಯಾಗುತ್ತಿದೆ. ಅತಿ ಹೆಚ್ಚಾಗಿ ಇಂಟರ್ ನೆಟ್ ಬಳಸುವವರಿಗೆ ಅದೇ ಚಟವಾಗಿ ಪರಿಣಮಿಸಿ, ಏಕಾಗ್ರತೆ ಇಲ್ಲವಾಗಿ ಅನ್ಯಮನಸ್ಕರಾಗುತ್ತಾರೆ. ಇದರಿಂದ ಹೊರಬರುವುದೇ ಕಷ್ಟಸಾಧ್ಯ ಎನ್ನಲಾಗಿದೆ. ಚೀನಾದಲ್ಲಿ ಇಂಟರ್ ನೆಟ್ ಅತಿಯಾದ ಬಳಕೆಯಿಂದ ಯುವಕರ ಮನಃಸ್ಥಿತಿ ಮೇಲೆ ಆಗಿರುವ ಪರಿಣಾಮಗಳ ತಡೆಗೆ ಹಿಂದೆಯೇ ಕ್ರಮಕೈಗೊಂಡು ಅಧ್ಯಯನ ನಡೆಸಲಾಗಿದೆ.

ಅತಿಯಾಗಿ ಇಂಟರ್ ನೆಟ್ ಬಳಸುವ ಚಟವನ್ನು ಗುಣಪಡಿಸುವ ಕಾಯಿಲೆ ಎಂದು ಚೀನಾ ಪರಿಗಣಿಸಿ, ಇಂಟರ್ ನೆಟ್ ಆಡಿಕ್ಷನ್ ಡಿಸಾರ್ಡರ್ ಎಂದು ಹೆಸರಿಸಿದೆ. ಇದಕ್ಕೆ ವೈದ್ಯಕೀಯ ಚಿಕಿತ್ಸೆ ನೀಡುವ ಬಗ್ಗೆಯೂ ಅಧ್ಯಯನ, ಸಂಶೋಧನೆ ನಡೆಸಲಾಗಿದೆ. ಅಧ್ಯಯನಕ್ಕಾಗಿ ಸಾವಿರಾರು ಜನರನ್ನು ಬಳಸಿಕೊಂಡು ಫಲಿತಾಂಶಗಳನ್ನು ಕಂಡುಕೊಳ್ಳಲಾಗಿದೆ. ಇದರ ಆಧಾರದ ಮೇಲೆ ಚಿಕಿತ್ಸೆಯನ್ನು ನೀಡಿ ಹೆಚ್ಚಿನ ಜನರನ್ನು ಗುಣಪಡಿಸಲಾಗಿದೆ. ಇದೇ ಕಾರಣಕ್ಕೆ ಇಂಟರ್ ನೆಟ್ ಅತಿಯಾದ ಬಳಕೆಯನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...