alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರಾ ಧರಿಸಿ ಕುಣಿದ ಪುರುಷನಿಗೆ ಸಿಕ್ಕ ಶಿಕ್ಷೆಯೇನು…?

ಕೇವಲ ಬ್ರಾ ಧರಿಸಿ ನೆರೆಹೊರೆಯವರ ಮುಂದೆ ಕುಣಿದರೆ ಅದು ಅಪರಾಧವಲ್ಲ, ವಿಲಕ್ಷಣ ನಡವಳಿಕೆ ಅಷ್ಟೆ ಅಂತಾ ಬ್ರಿಟನ್ ನ್ಯಾಯಾಲಯ ತೀರ್ಪು ನೀಡಿದೆ.

ಲನಾರ್ಕ್ ಶೈರ್ ನಲ್ಲಿ 41 ವರ್ಷದ ಡೇವಿಡ್ ಎಂಬಾತ ಮಹಿಳೆಯರ ಒಳ ಉಡುಪು ಧರಿಸಿ ಅಕ್ಕಪಕ್ಕದವರ ನೆಮ್ಮದಿ ಕೆಡಿಸಿದ್ದ. ಆತನ ವರ್ತನೆ ಪ್ರಚೋದನಕಾರಿ ನಿಜ, ಆದ್ರೆ ಅದು ಅಪರಾಧವಲ್ಲ ಅಂತಾ ಕೋರ್ಟ್ ಅಭಿಪ್ರಾಯಪಟ್ಟಿದೆ.

ಮಹಿಳೆಯರ ಉಡುಪನ್ನು ಪುರುಷ ತೊಡುವುದು ತಪ್ಪು, ಆದ್ರೆ ತನ್ನದೇ ಮನೆಯಲ್ಲಿ ಆತ ಈ ಕೃತ್ಯ ಎಸಗಿದ್ದಾನೆ. ಇದರಿಂದ ಸಮುದಾಯದ ಶಾಂತಿ ಭಂಗವಾಗಿರೋದು ಕೂಡ ಸುಳ್ಳಲ್ಲ ಅಂತಾ ಹೇಳಿದೆ.

2015ರ ಜನವರಿಯಿಂದ ಆಗಸ್ಟ್ ವರೆಗೆ ಹಲವು ಬಾರಿ ಡೇವಿಡ್, ಬ್ರಾ ಧರಿಸಿ ಕುಣಿದಿದ್ದ. ಅಕ್ಕಪಕ್ಕದ ಮನೆಯವರಿಗೆ ಕಾಣುವ ರೀತಿಯಲ್ಲೇ ಬಟ್ಟೆ ಬದಲಾಯಿಸುತ್ತಿದ್ದ. ನಂತರ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ. ಈ ಬಗ್ಗೆ ನೆರೆಮನೆಯಾತ ಕೇಸ್ ದಾಖಲು ಮಾಡಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...