alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಪುಟ್ಟ ಮಗಳೊಂದಿಗೆ ಹೆಜ್ಜೆ ಹಾಕಿದ ತಂದೆ ವಿಡಿಯೋ

ತಂದೆ-ತಾಯಿ ತಮ್ಮ ಮಕ್ಕಳ ಕುರಿತು ಕಾಳಜಿ ವಹಿಸುವುದು ಸಹಜ. ಅದರಲ್ಲೂ ತಂದೆಯಾದವರ ಜವಾಬ್ದಾರಿ ಹೆಚ್ಚಿರುತ್ತದೆ. ಹೀಗೆ ತಂದೆಯೊಬ್ಬ ತನ್ನ ಪುಟ್ಟ ಮಗಳ ವಿಚಾರದಲ್ಲಿ ತೋರಿಸಿದ ಕಾಳಜಿ ಈಗ ಇಂಟರ್ ನೆಟ್ ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಘಟನೆ ಬರ್ಮುಡಾದ ಹ್ಯಾಮಿಲ್ಟನ್ ನಗರದಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬ ತನ್ನ ಮಗಳ ಶಾಲಾ ಕಾರ್ಯಕ್ರಮಕ್ಕೆ ಪತ್ನಿ ಹಾಗೂ ಮಗುವಿನೊಂದಿಗೆ ತೆರಳಿದ್ದ.

ಆತನ ಪುಟ್ಟ ಮಗಳು ಇತರೆ ಮಕ್ಕಳೊಂದಿಗೆ ಬ್ಯಾಲೆ ನೃತ್ಯ ಮಾಡಬೇಕಾಗಿತ್ತು. ಆದರೆ ವೇದಿಕೆ ಏರಿದ ಆಕೆಗೆ ಸಭಾ ಕಂಪನ ಶುರುವಾಗಿದ್ದು, ನಿಂತಲ್ಲೇ ನಿಂತು ಬಿಟ್ಟಿದ್ದಳು. ಮಗಳ ನೃತ್ಯಕ್ಕೆ ವೇದಿಕೆ ಹಿಂದಿನಿಂದ ಸೂಚನೆ ನೀಡುತ್ತಿದ್ದ ಆಕೆಯ ತಂದೆ, ಮಗಳು ಸ್ಪಂದಿಸದಿರುವುದು ಕಂಡು ತನ್ನ ಮತ್ತೊಂದು ಮಗುವನ್ನು ಕೈಯಲ್ಲಿಡಿದುಕೊಂಡೇ ವೇದಿಕೆಗೆ ಬಂದಿದ್ದಾನೆ.

ವೇದಿಕೆಯಲ್ಲಿದ್ದ ಇತರೆ ಮಕ್ಕಳೊಂದಿಗೆ ತನ್ನ ಮಗಳ ಕೈ ಹಿಡಿದುಕೊಂಡು ಬ್ಯಾಲೆ ನೃತ್ಯಕ್ಕೆ ಹೆಜ್ಜೆ ಹಾಕಿದ್ದಾನೆ. ಕೊಂಚವೂ ಸಂಕೋಚಪಡದೆ ಮಗಳಿಗೆ ಪ್ರೋತ್ಸಾಹ ನೀಡಲು ಮುಂದಾದ ತಂದೆಯ ಕಾರ್ಯಕ್ಕೆ ಈಗ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆಯಲ್ಲದೆ, ‘ಬೆಸ್ಟ್ ಡ್ಯಾಡ್ ಆಫ್ ದಿ ಇಯರ್’ ಎಂದು ಹಲವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

Dad Saves the Day by Joining His Daughter and Tutu-Clad Ballerinas on Stage

Dad of the year! You can tell he has spent much time with her practice to know the steps so well! It takes a REAL DAD to do this, these are lucky children!Credit: storyful

Posted by Blunt Kommunity on Friday, June 8, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...