alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳ ಕನಸಿಗಾಗಿ 7 ವರ್ಷದಿಂದ ನೂಡಲ್ಸ್ ತಿನ್ನುತ್ತಿರುವ ತಂದೆ

ಮಕ್ಕಳಿಗಾಗಿ ಅಮ್ಮಂದಿರು ಸಾಕಷ್ಟು ತ್ಯಾಗ ಮಾಡಿರುವುದನ್ನು ನೀವು ಕೇಳಿರುತ್ತೀರ. ತಂದೆಯೂ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ತನ್ನ ಸುಖವನ್ನು ತ್ಯಾಗ ಮಾಡಬಲ್ಲ. ಇದಕ್ಕೆ ಚೀನಾದ ವ್ಯಕ್ತಿಯೊಬ್ಬ ಉತ್ತಮ ನಿದರ್ಶನ.

ಚೀನಾದ ಯಾನ್ವೈ ತನ್ನ ಮಗಳ ಉತ್ತಮ ಭವಿಷ್ಯಕ್ಕೆ ಪಣ ತೊಟ್ಟಿದ್ದಾನೆ. ಮಗಳು ಜಿಂಜನ್ ಜಿಮ್ನಾಸ್ಟಿಕ್ ಕನಸು ನನಸಾಗಿಸಲು ಕಳೆದ 7 ವರ್ಷಗಳಿಂದ ನೂಡಲ್ಸ್, ಬ್ರೆಡ್ ತಿಂದು ಜೀವನ ನಡೆಸುತ್ತಿದ್ದಾನೆ. ಕೆಲ ವರ್ಷಗಳ ಹಿಂದೆಯೇ ಯಾನ್ವೈ ಪತ್ನಿ ವಿಚ್ಛೇದನ ನೀಡಿದ್ದಾಳೆ. ಅಲ್ಲಿಂದ ಮಗಳಿಗೆ ಅಪ್ಪ-ಅಮ್ಮ ಎರಡೂ ಆಗಿದ್ದಾನೆ ಯಾನ್ವೈ.

44 ವರ್ಷದ ಯಾನ್ವೈಗೆ ಮಗಳು ಜಿಮ್ನಾಸ್ಟಿಕ್ ಕಲಿಯುವ ಆಸೆ ಹೊಂದಿದ್ದಾಳೆಂಬುದು 7 ವರ್ಷದ ಹಿಂದೆ ಗೊತ್ತಾಗಿದೆ. ಅದಕ್ಕೆ ಸಾಕಷ್ಟು ಹಣ ಬೇಕು. ಪೊರಕೆ ಹಿಡಿದು ರಸ್ತೆ ಕ್ಲೀನ್ ಮಾಡುವ ಈತನ ಬಳಿ ಅಷ್ಟೊಂದು ಹಣ ಎಲ್ಲಿಂದ ಬರಲು ಸಾಧ್ಯ? ತಿಂಗಳಿಗೆ 2 ಸಾವಿರ ರೂಪಾಯಿ ಗಳಿಸುವ ಯಾನ್ವೈ ಮಗಳಿಗಾಗಿ ಊಟ ಬಿಟ್ಟಿದ್ದಾನೆ.

ನೂಡಲ್ಸ್ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದು, ಉಳಿದ ಹಣವನ್ನು ಮಗಳಿಗಾಗಿ ತೆಗೆದಿಡುತ್ತಿದ್ದಾನೆ. ಈವರೆಗೆ ಸುಮಾರು 2 ಟನ್ ನ್ಯೂಡಲ್ಸ್ ತಿಂದಿದ್ದಾನೆ ಈತ. ಹೆಣ್ಣು ಮಕ್ಕಳು ಹೊರೆ ಎನ್ನುವ ಪಾಲಕರಿಗೆ ಯಾನ್ವೈ ಮಾದರಿಯಾಗಿದ್ದಾನೆ. ಆತನ ತ್ಯಾಗ ನೋಡಿ ಪಾಲಕರು  ಕಲಿಯಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...