alex Certify
ಕನ್ನಡ ದುನಿಯಾ       Mobile App
       

Kannada Duniya

ಮುದ್ದಿನ ಮಗಳಿಗಾಗಿ ಈತ ಮಾಡಿದ್ದೇನು…?

park

ಟೆಕ್ಸಾಸ್ ನಲ್ಲಿ ವ್ಯಕ್ತಿಯೊಬ್ಬ ತನ್ನ ಮುದ್ದಿನ ಮಗಳಿಗಾಗಿ ಅಮ್ಯೂಸ್ಮೆಂಟ್ ಪಾರ್ಕನ್ನೇ ನಿರ್ಮಾಣ ಮಾಡಿದ್ದಾನೆ. 2007ರಲ್ಲಿ ‘ಮೊರ್ಗನ್ಸ್ ವಂಡರ್ ಲ್ಯಾಂಡ್’ ಎಂಬ ಈ ಪಾರ್ಕ್ ನಿರ್ಮಾಣ ಕಾರ್ಯವನ್ನು ಗೊರ್ಡೊನ್ ಹಾರ್ಟ್ ಮ್ಯಾನ್ ಆರಂಭಿಸಿದ್ದ. 2010ರಲ್ಲಿ ಪಾರ್ಕ್ ಉದ್ಘಾಟನೆಯಾಗಿದೆ.

ಗೊರ್ಡೊನ್ ನ ಪುತ್ರಿ ವಿಕಲಚೇತನೆ, ಜೊತೆಗೆ ಆಟಿಸಂ ಖಾಯಿಲೆಯಿಂದ ಬಳಲುತ್ತಿದ್ದಾಳೆ. ಹಾಗಾಗಿ ಬೇರೆ ಪಾರ್ಕ್ ಗಳಲ್ಲಿ ಅವಳಿಗಿಷ್ಟವಾದ ಆಟಗಳನ್ನು ಆಡಲು ಅವಕಾಶ ನೀಡುತ್ತಿರಲಿಲ್ಲ. ಇದೇ ಕಾರಣಕ್ಕೆ ಗೊರ್ಡೊನ್ 32 ಮಿಲಿಯನ್ ಡಾಲರ್ ವೆಚ್ಚ ಮಾಡಿ ಉದ್ಯಾನವನ ನಿರ್ಮಿಸಿದ್ದಾರೆ.

ಸ್ಯಾನ್ ಆಂಟೊನಿಯೋದಲ್ಲಿ 25 ಎಕರೆ ವಿಸ್ತಾರವಾದ ಪಾರ್ಕ್ ಇದೆ. ಇಲ್ಲಿ 26 ಬಗೆಯ ಆಟಗಳಿವೆ. ವ್ಹೀಲ್ ಚೇರ್, ಮಿನಿಯೇಚರ್ ಟ್ರೈನ್ ಸೌಲಭ್ಯವೂ ಇದೆ. 2006ರಲ್ಲಿ 12 ವರ್ಷದ ತಮ್ಮ ಮಗಳು ಮೊರ್ಗೊನ್ ಜೊತೆಗೆ ಗೊರ್ಡೊನ್ ಈಜುಕೊಳಕ್ಕೆ ಬಂದಿದ್ರು. ಅವಳಿಗೂ ಅಲ್ಲಿ ಈಜುವಾಸೆ, ಆಕೆ ಕೊಳಕ್ಕೆ ಇಳಿಯುತ್ತಿದ್ದಂತೆ ಉಳಿದ ಮಕ್ಕಳೆಲ್ಲ ಅಲ್ಲಿಂದ ಹೊರಟುಹೋಗಿದ್ರು.

ಆಗಲೇ ಮಗಳಿಗಾಗಿ ಪ್ರತ್ಯೇಕ ಪಾರ್ಕ್ ನಿರ್ಮಿಸಬೇಕೆಂದು ಗೊರ್ಡೊನ್ ನಿರ್ಧರಿಸಿಬಿಟ್ಟಿದ್ರು. ಈಗ ಅವರು ನಿರ್ಮಾಣ ಮಾಡಿರುವ ಪಾರ್ಕ್ ಗೆ 67 ದೇಶಗಳ ಪ್ರವಾಸಿಗರು ಭೇಟಿ ನೀಡಿದ್ದಾರೆ. ಪಾರ್ಕ್ ನಲ್ಲಿ ವಿಶಿಷ್ಟ ಸೌಲಭ್ಯಗಳನ್ನು ಒದಗಿಸಲಾಗಿದೆ. ವೃದ್ಧರು, ಮಕ್ಕಳು ಎಲ್ಲರೂ ಇಲ್ಲಿ ಎಂಜಾಯ್ ಮಾಡಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...