alex Certify
ಕನ್ನಡ ದುನಿಯಾ       Mobile App
       

Kannada Duniya

ಅಚ್ಚರಿ: ಹುಟ್ಟಿದ ಮಗುವಿಗೆ ಎದೆ ಹಾಲುಣಿಸಿದ ಅಪ್ಪ…!

ಅಮೆರಿಕ ವಿಸ್ಕಾನ್ಸಿಸ್ ನಗರದಲ್ಲಿ ಇಡೀ ಜಗತ್ತು ಅಚ್ಚರಿಪಡುವ ಸಂಗತಿಯೊಂದು ನಡೆದಿದೆ. ಹುಟ್ಟಿದ ಮಗುವಿಗೆ ತಂದೆಯೇ ಎದೆ ಹಾಲುಣಿಸಿದ ಅಪರೂಪದಲ್ಲೇ ಅಪರೂಪವಾದ ಘಟನೆ ನಡೆದಿದೆ.

ನಿಮಗೆ ವಿಚಿತ್ರ ಎನಿಸಿದ್ರು ಇದೇ ಸತ್ಯ. ವಿಸ್ಕಾನ್ಸಿಸ್ ನ ಮ್ಯಾಕ್ಮಿಲನ್ ಎಂಬ ವ್ಯಕ್ತಿ ಈಗ ವಿಶ್ವದಲ್ಲೇ ಮೊದಲ ಬಾರಿ ಎದೆ ಹಾಲುಣಿಸಿದ ಅಪ್ಪ ಎಂಬ ಅಪೂರ್ವ ದಾಖಲೆ ಬರೆದಿದ್ದಾನೆ.

ಮ್ಯಾಕ್ಮಿಲನ್ ಪತ್ನಿ ಅಪ್ರಿಲ್ ನುಬೌಯರ್ ಹೆಣ್ಣುಮಗುವಿಗೆ ಜನ್ಮ ನೀಡಿದ್ರು. ಆನಂತರದಲ್ಲಿ ಉಂಟಾದ ಆರೋಗ್ಯ ಸಮಸ್ಯೆಯಿಂದಾಗಿ ತಾಯಿಯನ್ನ ವೈದ್ಯರು ತೀವ್ರ ನಿಗಾ ಘಟಕಕ್ಕೆ ಶಿಫ್ಟ್ ಮಾಡಿದರು. ಹುಟ್ಟಿದ ಮಗುವಿಗೆ ತಾಯಿಯ ಎದೆಹಾಲು ಕೊಡಬೇಕಿತ್ತು. ಆದ್ರೆ ತಾಯಿ ಎದೆಹಾಲು ಕೊಡಲಾಗದಂತಾ ಸ್ಥಿತಿಯಲ್ಲಿದ್ದ ಕಾರಣ ಮಗುವಿನ ತಂದೆಯಾದ ಮ್ಯಾಕ್ಮಿಲನ್ ತಾವೇ ಎದೆಹಾಲುಣಿಸೋದಕ್ಕೆ ಮುಂದಾದರು.

ಹೆರಿಗೆಯ ನಂತರದಲ್ಲಿ ಇಂತಾ ಪರಿಸ್ಥಿತಿ ಬರಬಹುದು ಅನ್ನೋದನ್ನ ಮೊದಲೇ ಅಂದಾಜಿಸಿದ್ದ ವೈದ್ಯರು ಅದಕ್ಕಾಗಿ ಪರ್ಯಾಯ ವ್ಯವಸ್ಥೆಗಳನ್ನ ಮಾಡಿಕೊಂಡಿದ್ದರು. ಸ್ಕಿನ್ ಟು ಸ್ಕಿನ್ ಅನ್ನೋ ವೈದ್ಯಕೀಯ ಪದ್ಧತಿಯ ಮೂಲಕ ಮಗುವಿಗೆ ಎದೆ ಹಾಲುಣಿಸುವ ಅವಕಾಶ ಮ್ಯಾಕ್ಮಿಲನ್ ಗೆ ಸಿಕ್ಕಿತು. ಮ್ಯಾಕ್ಮಿಲನ್ ಅಪ್ಪನ ಜೊತೆಗೆ ಅಮ್ಮನೂ ಆದ ಅಪರೂಪದ ಕ್ಷಣಗಳು ಈಗ ಸಾಮಾಜಿಕ ಜಾಲದಲ್ಲೂ ಪ್ರಶಂಸೆಗೆ ಒಳಗಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...