alex Certify
ಕನ್ನಡ ದುನಿಯಾ       Mobile App
       

Kannada Duniya

ಲಕ್ಷಾಂತರ ಮಂದಿಯ ಮನಗೆದ್ದ ಈ ಜಾಹೀರಾತಿನಲ್ಲಿ ಅಂಥದ್ದೇನಿದೆ…?

ರಸವತ್ತಾದ ಅಡುಗೆಯಿಂದ ಒಬ್ಬ ವ್ಯಕ್ತಿಯ ಮನಗೆಲ್ಲಬಹುದು ಅಂತ ಹೇಳ್ತಾರೆ. ಈ ಕಾನ್ಸೆಪ್ಟ್ ಮೇಲೆ ಬಿಡುಗಡೆಯಾಗಿರುವ ಪಾಕಿಸ್ತಾನದ ಜಾಹೀರಾತೊಂದು ಎಂಟು ಲಕ್ಷ ಮಂದಿಯ ಮನಗೆದ್ದಿದೆ. ವಧುವನ್ನು ನೋಡೋಕೆ ಬಂದ ಯುವಕನೊಬ್ಬ ಬಿರಿಯಾನಿ ಮಾಡಿ ಎಲ್ಲರ ಮನ ಗೆಲ್ಲುವ ನಾಲ್ಕು ನಿಮಿಷಗಳ ವಿಡಿಯೋ ಈಗ ಜನರ ಮನ ಗೆದ್ದಿದೆ.

ತಾಯಿಯ ನಿಧನದ ಬಳಿಕ ಬಿರಿಯಾನಿ ತಿನ್ನೋದನ್ನ ಒಂದು ಮನೆಯವರು ನಿಲ್ಲಿಸಿಬಿಟ್ಟಿರ್ತಾರೆ. ಆದ್ರೆ ಮನೆಗೆ ಬಂದ ಅತಿಥಿಗಳಿಗೆ ಅಡುಗೆಯವರು ಬಿರಿಯಾನಿ ಮಾಡಿ ಬಡಿಸುತ್ತಿರ್ತಾರೆ. ಇಂತಾ ಮನೆಯಲ್ಲಿರುವ ವಧುವೊಬ್ಬಳನ್ನ ಮದುವೆಯಾಗೋದಕ್ಕೆ ಆಕೆಯನ್ನ ನೋಡಲು ವರನೊಬ್ಬ ಬರ್ತಾನೆ. ವರನ ಸಾಮರ್ಥ್ಯವನ್ನು ಪರೀಕ್ಷಿಸಲು ವಧುವಿನ ಸೋದರರು ವರನಿಗೆ ಹಲವು ರೀತಿಯಲ್ಲಿ ಕಾಡಿಸುತ್ತಾರೆ. ಈ ಸಂದರ್ಭದಲ್ಲಿ ಮನೆಗೆ ಬಿರಿಯಾನಿ ಮಾಡೋದಕ್ಕೆ ಬರ್ತಿದ್ದ ಅಡುಗೆಯವನು ಅಂದು ಬಂದಿರೋದಿಲ್ಲ.

ಈ ಸಂದರ್ಭದಲ್ಲಿ ವರನೇ ರುಚಿ ರುಚಿಯಾಗಿ ಬಿರಿಯಾನಿ ಮಾಡಿ ಎಲ್ಲರ ಮನ ಗೆಲ್ಲುತ್ತಾನೆ. ‘ಒನ್ ಬಿರಿಯಾನಿ ಒನ್ ಫ್ಯಾಮಿಲಿ’ ಹೆಸರಿನಲ್ಲಿ ಬಿಡುಗಡೆಯಾಗಿರುವ ಈ ವಿಡಿಯೋ, ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿಬಿಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...