alex Certify
ಕನ್ನಡ ದುನಿಯಾ       Mobile App
       

Kannada Duniya

ಫೋಟೋ ಕಾರಣಕ್ಕೆ ಕೆಲಸ ಕಳೆದುಕೊಂಡಿದ್ದಾಳೆ ಮಹಿಳೆ

ಅಮೆರಿಕಾದಲ್ಲಿ ಮಹಿಳೆಯೊಬ್ಬಳು ವಿಚಿತ್ರ ಕಾರಣಕ್ಕೆ ತನ್ನ ಕೆಲಸ ಕಳೆದುಕೊಂಡಿದ್ದಾಳೆ. ಬಿಲ್ಡರ್ ಸಂಸ್ಥೆಯಲ್ಲಿ ಮಾರ್ಕೆಂಟಿಂಗ್ ಅಧಿಕಾರಿಯಾಗಿದ್ದ ಮಹಿಳೆ ಮಾಡಿದ ಕೃತ್ಯವೊಂದರ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಸಂಸ್ಥೆ ಆಕೆಯನ್ನು ಮನೆಗೆ ಕಳುಹಿಸಿದೆ.

ಅಷ್ಟಕ್ಕೂ ಈ ಮಹಿಳೆ ಮಾಡಿದ್ದೇನು ಅಂತೀರಾ. ಅಕ್ಟೋಬರ್ 28 ರ ಶನಿವಾರದಂದು ಈ ಮಹಿಳೆ ಸೈಕ್ಲಿಂಗ್ ಮಾಡಿಕೊಂಡು ಹೊರಟಿದ್ದಾಳೆ. ಇದೇ ಸಂದರ್ಭದಲ್ಲಿ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ವೈಟ್ ಹೌಸ್ ನಿಂದ 40 ಕಿ.ಮೀ. ದೂರದಲ್ಲಿರುವ ತಮ್ಮ ಗಾಲ್ಫ್ ಕ್ಲಬ್ ಗೆ ಹೊರಟಿದ್ದು, ಟ್ರಂಪ್ ಮತ್ತವರ ಪರಿವಾರವಿದ್ದ ಕಾರ್ ತನ್ನ ಮುಂದೆ ಹಾದು ಹೋಗುವ ವೇಳೆ ಜ್ಯೂಲಿ ಬ್ರಿಸ್ಕ್ಮ್ಯಾನ್ ಎಂಬ ಈ ಮಹಿಳೆ ಮಧ್ಯದ ಬೆರಳು ತೋರಿಸಿದ್ದಾಳೆ. ಡೋನಾಲ್ಡ್ ಟ್ರಂಪ್ ರ ಬೆಂಗಾವಲು ವಾಹನದಲ್ಲಿದ್ದ ವೈಟ್ ಹೌಸ್ ಫೋಟೋಗ್ರಾಫರ್ ಈ ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಮೊದಲಿಗೆ ಸೈಕಲ್ ಮೇಲೆ ಹೋಗುತ್ತಿದ್ದ ಮಹಿಳೆ ಯಾರೆಂದು ತಿಳಿದಿಲ್ಲವಾದರೂ ಈ ಫೋಟೋ ನೋಡಿದ ಮಹಿಳೆ ಫೇಸ್ ಬುಕ್, ಇನ್ಸ್ಟಾಗ್ರಾಂ ಸೇರಿದಂತೆ ತನ್ನ ಹಲವು ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹೆಮ್ಮೆಯಿಂದ ಫೋಟೋವನ್ನು ರೀ ಪೋಸ್ಟ್ ಮಾಡಿ ಅದು ತಾನೇ ಎಂದು ಹೇಳಿಕೊಂಡಿದ್ದಾಳೆ. ಈ ವಿಚಾರ ಆಕೆ ಕೆಲಸ ಮಾಡುತ್ತಿದ್ದ ಬಿಲ್ಡರ್ ಸಂಸ್ಥೆಗೆ ತಿಳಿಯುತ್ತಿದ್ದಂತೆಯೇ ಆಕೆಯನ್ನು ಕೆಲಸದಿಂದ ವಜಾ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...