alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ಣಂಚನ್ನು ತೇವಗೊಳಿಸುತ್ತೆ ಮನಕಲಕುವ ಈ ಘಟನೆ

ಜಾನ್ ಹಾಗೂ ಆತನ ಪತ್ನಿ ಸ್ಟೆಲ್ಲಾ ಕಳೆದ 30 ವರ್ಷಗಳಿಂದ ಕ್ಯಾಲಿಫೋರ್ನಿಯಾದ ಸೀಲ್ ಬೀಚ್‌ನಲ್ಲಿ ಡೋನಟ್ ಮಳಿಗೆ ಇಟ್ಟುಕೊಂಡಿದ್ದಾರೆ. ಮಳಿಗೆಯ ರಿಸೆಪ್ಶನ್ ಕೌಂಟರ್‌ನಲ್ಲಿ ಕೂರುತ್ತಿದ್ದ ಸ್ಟೆಲ್ಲಾ ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾದಳು. ಕಳೆದ ತಿಂಗಳಿನಿಂದ ಮಿದುಳು ಊತಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಪತ್ನಿ ಪೂರ್ತಿಯಾಗಿ ಚೇತರಿಸಿಕೊಳ್ಳುವ ತನಕ ಆಕೆಯೊಂದಿಗೆ ಹೆಚ್ಚು ಸಮಯ ವಿನಿಯೋಗಿಸಲು ಜಾನ್ ನಿರ್ಧರಿಸಿದ. ಇದರಿಂದಾಗಿ ಮಳಿಗೆ ಬಾಗಿಲು ಬೇಗ ಹಾಕಬೇಕಾಗಿ ಬಂತು. ಮಾರಾಟಕ್ಕೂ ಹೊಡೆತ ಬಿತ್ತು. ಆದರೆ ಈ ವಿಷಯ ತಿಳಿದ ನಿಷ್ಠಾವಂತ ಗ್ರಾಹಕರು ಆತನ ಕೈಬಿಡಲಿಲ್ಲ.

ಕಳೆದ ಎರಡು ವಾರಗಳಿಂದ ಗ್ರಾಹಕರು ಬೆಳಗ್ಗೆ 4.30 ರಿಂದಲೇ ಡೋನಟ್ ಸಿಟಿ ಮಳಿಗೆಯ ಮುಂದೆ ಕ್ಯೂ ನಿಲ್ಲತೊಡಗಿದ್ದಾರೆ. ಬೆಳಗ್ಗೆ 7.30 ರ ವೇಳೆಗೆಲ್ಲಾ ಎಲ್ಲಾ ಐಟಂಗಳು ಮಾರಾಟವಾಗಿ ಖಾಲಿಯಾಗುತ್ತವೆ. ಸಾಮಾನ್ಯವಾಗಿ ಮಧ್ಯಾಹ್ನ 2.00 ಗಂಟೆಗೆ ಅಂಗಡಿ ಬಾಗಿಲು ಹಾಕುತ್ತಿದ್ದ ಜಾನ್ ಈಗ 8 ಗಂಟೆಗೆಲ್ಲಾ ಮನೆ ಸೇರಿ ಹೆಂಡತಿಯ ಆರೈಕೆ ಮಾಡತೊಡಗುತ್ತಾನೆ.

ಮಳಿಗೆಯ ಮುಂದೆ ಕ್ಯೂ ನಿಂತ ಜನರೆಲ್ಲಾ ದೊಡ್ಡ ಪ್ರಮಾಣದಲ್ಲಿ ಡೋನಟ್‌ಗಳನ್ನು ಖರೀದಿಸತೊಡಗಿದ್ದಾರೆ. ದಿನಕ್ಕೆ 50 ಡಜನ್‌ಗೂ ಹೆಚ್ಚು ಡೋನಟ್‌ಗಳನ್ನು ಮಾರುತ್ತಾನೆ ಜಾನ್. ಗ್ರಾಹಕರ ಈ ಪ್ರೀತಿಗೆ ನಾನು ಋಣಿ ಎನ್ನುತ್ತಾ ಆನಂದಬಾಷ್ಪ ಸುರಿಸುತ್ತಾನೆ ಜಾನ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...