alex Certify
ಕನ್ನಡ ದುನಿಯಾ       Mobile App
       

Kannada Duniya

ಆಹಾರ ತಯಾರಿಸಲು ತರಿಸಿದ್ದ ಮೊಸಳೆ ನಾಪತ್ತೆ: ಹುಡುಕಲು ಮುಂದಾದ ಪೊಲೀಸರು

ಬೀಜಿಂಗ್: ಕೆಲವೊಮ್ಮೆ ಹೀಗೂ ಆಗುತ್ತೆ ನೋಡಿ….ಚೀನಾದ ರೆಸ್ಟೋರೆಂಟ್ ಒಂದರಲ್ಲಿ ಆಹಾರಕ್ಕಾಗಿ ತರಿಸಿದ್ದ ಮೊಸಳೆಯೊಂದು ಎಸ್ಕೇಪ್ ಆಗಿಬಿಟ್ಟಿದೆ. ಈ ಹಿನ್ನಲೆಯಲ್ಲಿ ರೆಸ್ಟೋರೆಂಟ್ ಮಾಲೀಕರು ಮೊಸಳೆ ಹುಡುಕಿಕೊಡುವಂತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈಗ ನಾಪತ್ತೆಯಾದ ಮೊಸಳೆ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ.

ಕೆಲವು ವಿಧದ ಜೀವಿಗಳನ್ನು, ವಿಚಿತ್ರ ರೀತಿಯ ಪ್ರಾಣಿಗಳನ್ನು ಆಹಾರವಾಗಿ ತಿನ್ನುವುದು ಚೀನಾದಲ್ಲಿ ಸಾಮಾನ್ಯ. ಹೀಗೆ ಮೊಸಳೆಯಿಂದ ವಿಶೇಷವಾದ ಆಹಾರ ಸಿದ್ಧಪಡಿಸಲೆಂದು ಝೆಜಿಯಾಂಗ್ ಪ್ರಾಂತ್ಯದ ರೆಸ್ಟೋರೆಂಟ್​ ನಲ್ಲಿ ಜೀವಂತ ಮೊಸಳೆಯೊಂದನ್ನು ತರಿಸಲಾಗಿತ್ತು. ಶೆಪ್ ಗಳೆಲ್ಲ ಆಹಾರ ತಯಾರಿಸುವುದರಲ್ಲಿ ನಿರತರಾಗಿದ್ದಾಗ ಈ ಮೊಸಳೆ ನಿಧಾನವಾಗಿ ಕಿಚನ್ ನಿಂದ ನಾಪತ್ತೆಯಾಗಿಬಿಟ್ಟಿದೆ.

ಈ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ರೆಸ್ಟೋರೆಂಟ್ ನ ಸಿಸಿ ಕ್ಯಾಮರಾ ಚೆಕ್ ಮಾಡಿದಾಗ ಪೊಲೀಸರಿಗೆ ಈ ಮೊಸಳೆ ರಾತ್ರಿ ಎರಡು ಗಂಟೆ ವೇಳೆ ರೆಸ್ಟೋರೆಂಟ್​ ಹೊರ ಭಾಗದಲ್ಲಿ ಓಡಾಡುತ್ತಿರುವುದು ಭದ್ರತಾ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಂತರ ಮೊಸಳೆ ಯಾವ ಭಾಗಕ್ಕೆ ಹೋಗಿದೆ ಎಂಬುದು ತಿಳಿಯುತ್ತಿಲ್ಲ. ಈ ಬಗ್ಗೆ ಚೀನಿ ಪೊಲೀಸರು ಈಗ ತನಿಖೆ ಆರಂಭಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...