alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ದೆವ್ವದ ದೃಶ್ಯ…!

ದೆವ್ವಗಳು ಮನುಷ್ಯ ಅಥವಾ ಪ್ರಾಣಿಗಳ ಆಕಾರದಲ್ಲಿರುತ್ತವೆ ಅನ್ನೋದು ಎಲ್ಲರೂ ತಿಳಿದಿರುವ ಸಂಗತಿ. ಆದ್ರೆ ಚೀನಾದಲ್ಲಿ ದೆವ್ವವೊಂದು ರೈಲಿನ ಆಕಾರದಲ್ಲಿ ಪ್ರತ್ಯಕ್ಷವಾಗಿದೆ. ಈ ದೆವ್ವದ ರೈಲು ಚೀನಾದ ನಿಲ್ದಾಣಕ್ಕೆ ಬಂದಿರುವ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮಾರ್ಚ್ 10ರಂದು ನಡೆದ ಘಟನೆ ಇದು. ರೈಲು ನಿಲ್ದಾಣದಲ್ಲಿ ನರಪಿಳ್ಳೆಯೂ ಇರಲಿಲ್ಲ. ಭದ್ರತಾ ಸಿಬ್ಬಂದಿ ಒಳಗೆ  ಕುಳಿತು ಸಿಸಿ ಟಿವಿ ಕ್ಯಾಮರಾ ಪರಿಶೀಲಿಸುತ್ತಿದ್ರು. ಆಗ ಈ ದೆವ್ವದ ರೈಲು ಬಂದಿರೋದು ಅವರ ಕಣ್ಣಿಗೆ ಬಿದ್ದಿದೆ.

ಸಾಮಾನ್ಯ ರೈಲಿನಂತೆ ಹಲವು ಬೋಗಿಗಳನ್ನು ಹೊಂದಿದ್ದ ದೆವ್ವದ ರೈಲು, ನಿಲ್ದಾಣದಲ್ಲಿ ಕೆಲವು ಕ್ಷಣಗಳ ಕಾಲ ನಿಂತು ಮತ್ತೆ ಮುಂದಕ್ಕೆ ಸಾಗಿದೆ. ಈ ದೃಶ್ಯವನ್ನು ನೋಡಿ ಭದ್ರತಾ ಸಿಬ್ಬಂದಿ ಬೆಚ್ಚಿ ಬಿದ್ದಿದ್ದಾರೆ. ಆದ್ರೆ ಇದು ನಿಜಕ್ಕೂ ದೆವ್ವಾನಾ? ಅಥವಾ ಸಿಸಿ ಟಿವಿ ತಾಂತ್ರಿಕ ಸಮಸ್ಯೆಯಿಂದ ವಿಡಿಯೋ ಈ ರೀತಿ ಕ್ಯಾಪ್ಚರ್ ಆಗಿದೆಯಾ ಅನ್ನೊ ಅನುಮಾನವೂ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...