alex Certify
ಕನ್ನಡ ದುನಿಯಾ       Mobile App
       

Kannada Duniya

ಆಟಿಕೆ ಗನ್ ನಿಂದ ಬೆದರಿಕೆ ಹಾಕಿದ್ದವನೀಗ ಅಂದರ್

ಆಟಿಕೆಯ ಗನ್ ಇಟ್ಟುಕೊಂಡು ವೇಗವನ್ನು ಕಡಿಮೆ ಮಾಡುವಂತೆ ಬಸ್ ಚಾಲಕರಿಗೆ ಜೀವ ಬೆದರಿಕೆಯೊಡ್ಡಿದ ಭಾರತೀಯ ಮೂಲದ ವ್ಯಕ್ತಿಯೊಬ್ಬನನ್ನು ದುಬೈನಲ್ಲಿ ಬಂಧಿಸಿದ ಘಟನೆ ನಡೆದಿದೆ.

ಬಸ್ ಡ್ರೈವರ್ ಗಳ ಅಜಾಗರೂಕ ಚಾಲನೆ ಹಾಗೂ ಪ್ರಯಾಣಿಕರ ಜೀವ ರಕ್ಷಣೆಗಾಗಿ ವ್ಯಕ್ತಿಯೊಬ್ಬ ತನ್ನ ಮಗಳ ಆಟಿಕೆಯ ಗನ್ ಹಿಡಿದು ಡ್ರೈವರ್ ಗಳನ್ನು ಬೆದರಿಸಿದ್ದಾನೆ. ತಾನು ಬೇರೆ ಪ್ರಯಾಣಿಕರ ಜೀವ ರಕ್ಷಣೆಯ ಉದ್ದೇಶದಿಂದ ಹೀಗೆ ಮಾಡಿದ್ದಾಗಿ ಆತ ಹೇಳಿದ್ದಾನೆ.

ಇನ್ನು, ಆತ ತಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದಾಗಿ ಡ್ರೈವರ್ ಗಳು ಹೇಳಿದ್ದಾರೆ. ಆತನಿಂದ ಬೆದರಿಕೆಗೆ ಒಳಗಾಗಿದ್ದ ಡ್ರೈವರ್ ಗಳು ಪೊಲೀಸರಿಗೆ ದೂರು ನೀಡಿದ್ದು, ದುಬೈನ ಗ್ಲೋಬಲ್ ವಿಲೇಜ್ ನಲ್ಲಿ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದ್ದಾರೆ. ದುಬೈನ ಕೋರ್ಟ್ ಅಂಗಳದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...