alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಕ್ರೇನ್ ಚಾಲಕ ಮೆರೆದ ಸಮಯಪ್ರಜ್ಞೆ

ಜಗತ್ತು ಸ್ವಾರ್ಥಿಗಳಿಂದ್ಲೇ ತುಂಬಿ ಹೋಗಿದೆ. ಎಲ್ಲೋ ಅಲ್ಲೊಬ್ರು, ಇಲ್ಲೊಬ್ರು ಪರೋಪಕಾರಿಗಳು ಸಿಗಬಹುದು. ಚೀನಾದ ಈ ಕ್ರೇನ್ ಚಾಲಕ ಕೂಡ ಹತ್ತಾರು ಪ್ರಯಾಣಿಕರ ಪ್ರಾಣ ಉಳಿಸಿದ್ದಾನೆ. ಚಾಂಗ್ಝೌ ಎಂಬಲ್ಲಿ ಬಸ್ ಒಂದು ಅಪಘಾತಕ್ಕೀಡಾಗಿ ನದಿಗೆ ಬಿದ್ದಿತ್ತು.

ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಕಟ್ಟಡ ಕಾರ್ಮಿಕನೊಬ್ಬ ಇದನ್ನು ಗಮನಿಸಿದ್ದಾನೆ. ಕೂಡಲೇ ಕ್ರೇನ್ ನಿಲ್ಲಿಸಿ ಕೆಳಕ್ಕೆ ಜಿಗಿದ ಆತ ಬಸ್ ನದಿಗೆ ಬಿದ್ದಿರೋದನ್ನು ನೋಡಿಕೊಂಡು ವಾಪಸ್ ಬಂದ. ಬಳಿಕ ಕ್ರೇನ್ ಅನ್ನು ಅಲ್ಲಿಗೇ ಕೊಂಡೊಯ್ದು, ಎಲ್ಲಾ ಪ್ರಯಾಣಿಕರನ್ನು ಮೇಲಕ್ಕೆತ್ತಿದ್ದಾನೆ.

ಕ್ರೇನ್ ಚಾಲಕನ ಸಮಯಪ್ರಜ್ಞೆ ಮತ್ತು ಪರೋಪಕಾರದಿಂದಾಗಿ ಎಲ್ಲರೂ ಬಚಾವ್ ಆಗಿದ್ದಾರೆ. ಸ್ಪೋರ್ಟ್ಸ್ ಯುಟಿಲಿಟಿ ವಾಹನ ಡಿಕ್ಕಿಯಾಗಿದ್ರಿಂದ ಬಸ್ ನದಿಗೆ ಬಿದ್ದಿತ್ತು. ಈ ವಿಡಿಯೋ ಸಾಮಾಜಿಕ ತಾಣಗಳಲ್ಲೂ ವೈರಲ್ ಆಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...