alex Certify
ಕನ್ನಡ ದುನಿಯಾ       Mobile App
       

Kannada Duniya

ಭಲೇ ಕಿಲಾಡಿ, ಚಾಕು ಹಿಡಿದ ಗ್ಯಾಂಗ್ ಸ್ಟರ್ ಏಡಿ !

crab-580x395

ಸಾಮಾನ್ಯವಾಗಿ ಕೆಲವು ಕಳ್ಳರು, ದರೋಡೆಕೋರರು, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವವರು ಕೈಯಲ್ಲಿ ಚಾಕು ಹಿಡಿದು ಜನರನ್ನು ಹೆದರಿಸಲು ಮುಂದಾಗುವುದನ್ನು ನೋಡಿರುತ್ತೀರಿ. ಇಲ್ಲೊಂದು ಏಡಿ ಮಾಡಿರುವುದನ್ನು ನೋಡಿದರೆ ನೀವು ಖಂಡಿತಾ ಮೂಗಿನ ಮೇಲೆ ಬೆರಳಿಡುತ್ತೀರಿ.

ಏಡಿಯೊಂದು ತನ್ನ ಕೊಂಡಿಯಲ್ಲಿ ಚಾಕು ಹಿಡಿದು ಅಡ್ಡಾದಿಡ್ಡಿ ಕಾಲು ಹಾಕುತ್ತಾ ಓಡಾಡುತ್ತಿರುವ ಈ ವೀಡಿಯೋ ನೋಡಿದರೆ ಅಚ್ಚರಿಯಾಗುವುದಂತೂ ಗ್ಯಾರಂಟಿ. ಮಲೆನಾಡು, ಬಯಲು ಸೀಮೆ, ಕರಾವಳಿ ಜಿಲ್ಲೆಗಳಲ್ಲಿ ಏಡಿ ಸಾರು, ಸುಕ್ಕ ಭಾರೀ ಫೇಮಸ್. ಈ ಹೆಸರು ಹೇಳುತ್ತಲೇ ಕೆಲವರಿಗೆ ಬಾಯಿಯಲ್ಲಿ ನೀರು ಬರುತ್ತದೆ. ಅದರಲ್ಲಿಯೂ ಮಳೆಗಾಲದಲ್ಲಿ ಗದ್ದೆಯ ಬದುವಿನಲ್ಲಿ, ಹೊಸ ಹತ್ತು ನೀರಿನಲ್ಲಿ ಏಡಿ ಹಿಡಿಯುವುದು ಬಹಳ ಕಡೆಗಳಲ್ಲಿ ರೂಢಿಯಲ್ಲಿದೆ.

ಬ್ರಿಟನ್ ನಲ್ಲಿ ಕಪ್ಪು ಏಡಿಯೊಂದು ಕೊಂಡಿಯಲ್ಲಿ ಚಾಕು ಹಿಡಿದು ಓಡಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಏಡಿಯ ಚಾಕುವಿನ ಪ್ರೀತಿಗೆ ಅಪಾರ ಸಂಖ್ಯೆಯ ಮಂದಿ ಲೈಕ್ ಮಾಡಿದ್ದಾರೆ ಎಂದು ಹೇಳಲಾಗಿದೆ.

 

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...