alex Certify
ಕನ್ನಡ ದುನಿಯಾ       Mobile App
       

Kannada Duniya

ಗಾಜಾ ತಲುಪಿದೆ ಬಾಟಲಿಯಲ್ಲಿ ತೇಲಿಬಿಟ್ಟ ಪ್ರೇಮಿಗಳ ಸಂದೇಶ

ಹಾಲಿಡೇ ಕಳೆಯಲು ಬಂದಿದ್ದ ಬ್ರಿಟಿಷ್ ಜೋಡಿ ಬಾಟಲ್ ನಲ್ಲಿ ಬರೆದಿಟ್ಟ ಸಂದೇಶ ದೂರದ ಗಾಜಾ ಪಟ್ಟಣ ತಲುಪಿದೆ. ರೋಡ್ಸ್ ದ್ವೀಪದಲ್ಲಿ ಮೀನುಗಾರನಿಗೆ ಈ ಬಾಟಲಿ ಸಿಕ್ಕಿದೆ. ಆಗಸ್ಟ್ 15ರಂದು ಮೀನು ಹಿಡಿಯಲು ತೆರಳಿದ್ದ ಜಿಹಾದ್ ಅಲ್ ಸೋಲ್ತನ್ ಎಂಬಾತನ ಬಲೆಗೆ ಈ ಬಾಟಲಿ ಸಿಕ್ಕಿಹಾಕಿಕೊಂಡಿತ್ತು.

ಈ ಪತ್ರ ಬರೆದಿದ್ದ ಬೆಥನಿ ವ್ರೈಟ್ ಮತ್ತಾಕೆಯ ಗೆಳೆಯ ಜ್ಯಾಕ್ ಮ್ಯಾರಿನರ್ ತಮ್ಮ ಇಮೇಲ್ ವಿಳಾಸವನ್ನು ಕೂಡ ಅದರಲ್ಲಿ ನಮೂದಿಸಿದ್ದರು. ಹಾಗಾಗಿ ಮೀನುಗಾರ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾನೆ. ಎರಡು ತಿಂಗಳ ಹಿಂದೆ ಬೆಥನಿ ಹಾಗೂ ಜ್ಯಾಕ್ ಗ್ರೀಕ್ ದ್ವೀಪಕ್ಕೆ ಬಂದಿದ್ರು.

ರೊಮ್ಯಾಂಟಿಕ್ ಹಾಲಿಡೇ ಎಂಜಾಯ್ ಮಾಡಲು ಬಂದಿದ್ದ ಜೋಡಿ, ಪುಟ್ಟ ಪತ್ರವೊಂದನ್ನು ಬರೆದು ಅದನ್ನು ಬಾಟಲಿಯಲ್ಲಿಟ್ಟು ಸಮುದ್ರಕ್ಕೆ ಬಿಸಾಡಿದ್ದರು. ಈ ಬಾಟಲಿ ಇಲ್ಲಿಂದ ಮುಂದಿನ ಬೀಚ್ ಗಾದ್ರೂ ತಲುಪಲಿ ಅಂತಾ ಬರೆದಿದ್ರು. ಆದ್ರೆ ನಿರೀಕ್ಷೆಗೂ ಮೀರಿ 800 ಕಿಮೀ ದೂರದ ಗಾಜಾಕ್ಕೆ ಪತ್ರ ತಲುಪಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...