alex Certify
ಕನ್ನಡ ದುನಿಯಾ       Mobile App
       

Kannada Duniya

ಇವರ ಡೇಟಿಂಗ್ ಕಥೆ ಕೇಳಿದ್ರೆ ಬೆರಗಾಗ್ತೀರಿ..!

couples-get-married-after-44-years-dating-in-uk

ಬ್ರಿಟನ್ನಿನ 84 ವರ್ಷದ ಕಾಲಿನ್ ಡನ್ ಮತ್ತು 82 ವರ್ಷದ ಸೈಲಿ ಸ್ಮಿತ್ 44 ವರ್ಷದ ಸುದೀರ್ಘ ಡೇಟಿಂಗ್ ನಂತರ ಈಗ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಇವರಿಬ್ಬರೂ 1972 ರಲ್ಲಿ ಪರಸ್ಪರ ಭೇಟಿಯಾಗಿದ್ದರು. ಆ ಸಮಯದಲ್ಲಿ ಸೈಲಿ ಅವರು ಒಂದು ಕ್ಲಬ್ ನಲ್ಲಿ ಕೆಲಸ ಮಾಡುತ್ತಿದ್ದರು. ಕಾಲಿನ್, ವಾರದ ಕೊನೆಗೆ ಆ ಕ್ಲಬ್ ಗೆ ಭೇಟಿ ನೀಡುತ್ತಿದ್ದರು. ಕ್ಲಬ್ ನಲ್ಲಿ ಪರಿಚಯವಾದ ಇವರ ನಡುವೆ ಪ್ರೀತಿ ಅಂಕುರಿಸಿತು. ನಂತರ ಇಬ್ಬರೂ ಬರೋಬ್ಬರಿ 44 ವರ್ಷ ಪ್ರೀತಿಸುತ್ತಲೇ ಇದ್ದರು. ಈಗ ನೂರಾರು ಜನರ ಸಮ್ಮುಖದಲ್ಲಿ ಮದುವೆಯಾಗಿ ದಾಖಲೆ ನಿರ್ಮಿಸಿದ್ದಾರೆ.

ಕ್ಲಬ್ ನಲ್ಲಿ ಇವರ ಪ್ರೀತಿ ಆರಂಭವಾದಾಗ ಇಬ್ಬರೂ ಸಂಸಾರಸ್ಥರಾಗಿದ್ದರು. ಸೈಲಿ ಅವರಿಗೆ ಆಗಲೇ 4 ಮಕ್ಕಳಿದ್ದ ಕಾರಣ ಅವರು ಕಾಲಿನ್ ಅವರೊಡನೆ ವಾಸವಾಗಲು ಒಪ್ಪಲಿಲ್ಲ. ಈಗ ಮಕ್ಕಳೆಲ್ಲ ಬೆಳೆದು ದೊಡ್ಡವರಾದ ಮೇಲೆ ಸೈಲಿ ಅವರು ಕಾಲಿನ್ ಅವರನ್ನು ವಿವಾಹವಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...