alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಯಲ್ಲಿ ಅಂತ್ಯವಾಯ್ತು ರಾಂಗ್ ನಂಬರ್ ಗೆ ಕಳಿಸಿದ್ದ ವಾಟ್ಸಾಪ್ ಮೆಸೇಜ್

ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಅನ್ನೋ ಮಾತಿದೆ. ಲೀನಾ ಹಾಗೂ ಮೈಖೆಲ್ ಬದುಕಿನಲ್ಲಿ ಈ ಮಾತು ನಿಜವಾಗಿದೆ. ರಾಂಗ್ ನಂಬರ್ ಗೆ ಆಕಸ್ಮಿಕವಾಗಿ ಕಳಿಸಿದ್ದ ವಾಟ್ಸಾಪ್ ಮೆಸೇಜ್ ಇವರನ್ನು ಒಂದುಗೂಡಿಸಿದೆ.

ಲಂಡನ್ ಮೂಲದ ಲೀನಾಗೆ ಕಳೆದ ವರ್ಷ ಅಪರಿಚಿತ ನಂಬರ್ ನಿಂದ ವಾಟ್ಸಾಪ್ ಮೆಸೇಜ್ ಬಂದಿತ್ತು. ಮೈಖೆಲ್ ಎಂಬಾತ ಗರ್ಲ್ಸ್ ಟ್ರಿಪ್ ಬಗ್ಗೆ ಮೆಸೇಜ್ ಕಳಿಸಿದ್ದ. ಅದನ್ನು ಓದಿದ ಲೀನಾ, ನೀವಂದುಕೊಂಡ ಲೀನಾ ನಾನಲ್ಲ, ಮೆಸೇಜ್ ತಪ್ಪು ಸಂಖ್ಯೆಗೆ ಬಂದಿದೆ ಅಂತಾ ಪ್ರತಿಕ್ರಿಯಿಸಿದ್ಲು.

ಈ ರೀತಿ ಮೈಖೆಲ್ ಹಾಗೂ ಲೀನಾರ ಚಾಟಿಂಗ್ ಶುರುವಾಗಿತ್ತು. ಕೊನೆಗೂ ಡಿನ್ನರ್ ಗಾಗಿ ಇಬ್ಬರೂ ಭೇಟಿ ಮಾಡಿದ್ದಾರೆ. ಪರಸ್ಪರರ ಕಂಪನಿ ಇಬ್ಬರಿಗೂ ಇಷ್ಟವಾಗಿದೆ. ಹಾಗಾಗಿ ಆಗಾಗ ಲಂಚ್, ಬ್ರಂಚ್, ಡಿನ್ನರ್ ಅಂತಾ ಮೀಟ್ ಆಗುತ್ತಲೇ ಇದ್ರು. ಹೀಗೆ ಶುರುವಾದ ಸ್ನೇಹ ಪ್ರೀತಿಯಾಗಿ ಬದಲಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಡಿಸೆಂಬರ್ 7ರಂದು ಇಬ್ಬರೂ ಮದುವೆಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...