alex Certify
ಕನ್ನಡ ದುನಿಯಾ       Mobile App
       

Kannada Duniya

ಆಸ್ಪತ್ರೆಯಲ್ಲೇ ಈ ಜೋಡಿ ಮದುವೆಯಾಗಿದ್ದು ಯಾಕೆ ಗೊತ್ತಾ…?

ಮೊಸಳೆ ದಾಳಿಗೆ ತುತ್ತಾಗಿ ತನ್ನ ತೋಳು ಕಳೆದುಕೊಂಡು ಆಸ್ಪತ್ರೆ ಸೇರಿದ್ದ ಮಹಿಳೆ, ಅಲ್ಲಿಯೇ ಮದುವೆಯಾದ ಘಟನೆ ಜಿಂಬಾಬ್ವೆಯಲ್ಲಿ ನಡೆದಿದೆ. ಜಿಂಬಾಬ್ವೆಯ ಎರಡನೇ ಅತಿ ದೊಡ್ಡ ನಗರ ಅಂತಾ ಕರೆಯಲ್ಪಡುವ ಬುಲಾವೇಯೋದಲ್ಲಿ, 60 ಮಂದಿ ಅತಿಥಿಗಳ ಮಧ್ಯೆ ತನ್ನ ಪ್ರಿಯಕರ ಜಮೀ ಫಾಕ್ಸ್ ನನ್ನು ಇಡ್ಲೋವಾ ಫಾಕ್ಸ್ ಎಂಬ ಯುವತಿ ಮದುವೆಯಾಗಿದ್ದಾಳೆ.

ಕೆಲ ದಿನಗಳ ಹಿಂದೆ ಇಡ್ಲೋವಾ ಫಾಕ್ಸ್ ಮತ್ತು ಆಕೆಯ ಪ್ರಿಯಕರ ಜಮೀ ಫಾಕ್ಸ್ ವಿಕ್ಟೋರಿಯಾ ಜಲಪಾತದ ಹತ್ತಿರವಿರುವ ಜಾಂಬೆಯ ನದಿಯಲ್ಲಿ ದೋಣಿ ವಿಹಾರ ಮಾಡ್ತಿದ್ರು. ಆಗ ಮೊಸಳೆ ದಾಳಿ ನಡೆಸಿತ್ತು. ಈ ವೇಳೆ ಇಡ್ಲೋವಾ ಫಾಕ್ಸ್ ತನ್ನ ತೋಳನ್ನೇ ಕಳೆದುಕೊಂಡಿದ್ಲು. ತಕ್ಷಣವೇ ಆಕೆಯನ್ನ ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಸೇರಿಸಲಾಯ್ತು.

ಈ ಘಟನೆ ನಡೆಯುವುದಕ್ಕೂ ಮುನ್ನ, ಇಡ್ಲೋವಾ ಮತ್ತು ಜಮೀ ಮದುವೆಗೆ ಕೆಲ ದಿನಗಳಷ್ಟೇ ಬಾಕಿ ಇದ್ದವು. ಹೀಗಾಗಿ ಇಡ್ಲೋವಾ ತನ್ನ ಮದುವೆಗೆ ಭಾರಿ ತಯಾರಿ ನಡೆಸಿದ್ಲು. ಡೆಕೋರೇಷನ್ ನಿಂದ ಹಿಡಿದು, ಊಟದ ವ್ಯವಸ್ಥೆಯವರೆಗೂ ಇವಳೇ ನೋಡಿಕೊಂಡಿದ್ದಳು. ಆದ್ರೆ ಮೊಸಳೆ ದಾಳಿಯಿಂದಾಗಿ ಅವರ ಮದುವೆಯ ಎಲ್ಲಾ ಸಿದ್ದತೆಗಳು ವ್ಯರ್ಥವಾಗುತ್ತಿದ್ದವು.

ಇಷ್ಟೆಲ್ಲಾ ನೋವಿನಲ್ಲೂ ಈ ಜೋಡಿ ಆಸ್ಪತ್ರೆಯಲ್ಲೇ ಮದುವೆಯಾಗಿದೆ. ವಧುವಿನಂತೆ ಸಿಂಗಾರಗೊಂಡ ಇಡ್ಲೋವಾ, ರಿಂಗ್ ಬದಲಾಯಿಸಿ ಸತಿ-ಪತಿಗಳಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪತಿ ಜಮ್ಮಿ, ಮೊಸಳೆ ದಾಳಿಯಿಂದ ನಮ್ಮಿಬ್ಬರ ಪ್ರೀತಿ ಮತ್ತಷ್ಟು ಗಟ್ಟಿಯಾಯ್ತು ಅಂತಾರೆ. ಆಸ್ಪತ್ರೆಯಿಂದ ಇಡ್ಲೋವಾ ರಿಲೀಸ್ ಆಗ್ತಿದ್ದಂತೆ ಈ ಜೋಡಿ ಬ್ರಿಟನ್ ಗೆ ತೆರಳಲಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...