alex Certify
ಕನ್ನಡ ದುನಿಯಾ       Mobile App
       

Kannada Duniya

ಕನಸಿನ ಮದುವೆಗಾಗಿ ಯುವ ಜೋಡಿಗೆ ಬೇಕಾಗಿದ್ದಾರೆ ಪ್ರಾಯೋಜಕರು

ಮದುವೆ ಅನ್ನೋದು ಪ್ರತಿಯೊಬ್ಬರ ಬದುಕಿನ ಅಮೂಲ್ಯ ಕ್ಷಣ. ಸದಾ ನೆನಪಿನಲ್ಲುಳಿಯುವಂತೆ ವಿಶಿಷ್ಟವಾಗಿರಲಿ ಅಂತಾನೇ ಆಸೆ ಪಡೋದು ಸಹಜ. ಆದ್ರೆ ಡ್ರೀಮ್ ವೆಡ್ಡಿಂಗ್ ಅಂದಾಕ್ಷಣ ಕೈತುಂಬಾ ಹಣ ಬೇಕು. ಕೆನಡಾದ ಜಾಸನ್ ಮೀಲ್ಕೆ ಹಾಗೂ ರೆಬೆಕ್ಕಾ ವಿಂಟರ್ ಗೂ ಡ್ರೀಮ್ ವೆಡ್ಡಿಂಗ್ ಮಾಡಿಕೊಳ್ಳೋ ಆಸೆ.

2015ರಿಂದ್ಲೂ ಪರಸ್ಪರ ಪ್ರೀತಿಸ್ತಾ ಇರೋ ಜೋಡಿ ಈ ಬಾರಿ ವಿಂಟರ್ ನಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ. ತೈಲ ಕಂಪನಿಯೊಂದರಲ್ಲಿ ಕೆಲಸ ಮಾಡ್ತಾ ಇದ್ದ ಜಾಸನ್, ದುರದೃಷ್ಟವಶಾತ್ ಕೆಲಸ ಕಳೆದುಕೊಂಡಿದ್ದಾರೆ. ನವೆಂಬರ್ 25ರಂದು ಮದುವೆ ನಿಗದಿಯಾಗಿದೆ.

ಆದ್ರೀಗ ಜಾಸನ್ ಗೆ ಆರ್ಥಿಕ ಮುಗ್ಗಟ್ಟು ಎದುರಾಗಿದೆ, ಮದುವೆ ಖರ್ಚಿಗೆ ಹಣವಿಲ್ಲ. ಹಾಗಾಗಿ ಈ ಜೋಡಿ ಕ್ರೌಡ್ ಫಂಡಿಂಗ್ ಶುರು ಮಾಡಿದ್ದಾರೆ. ಅಪರಿಚಿತರು ಕೂಡ ಇವರ ಡ್ರೀಮ್ ವೆಡ್ಡಿಂಗ್ ಗೆ ಆರ್ಥಿಕ ಸಹಾಯ ಮಾಡಬಹುದು. ಇದಕ್ಕೆ ಪ್ರತಿಯಾಗಿ ಅವರ ಮದುವೆಯಲ್ಲಿ ಪಾಲ್ಗೊಳ್ಳುವ ಅವಕಾಶ ದಾನಿಗಳಿಗೆ ಸಿಗುತ್ತದೆ.

ವಧುವಿಗೆ ಮದುವೆಗೂ ಮುನ್ನ ಸ್ಪಾ ಸೆಶನ್, ವಿಂಟರ್ ಶಾಲ್, ಸಿಗಾರ್ಸ್, ಚರ್ಚ್ ಗೆ ಸಾಗಲು ರೆಡ್ ಕಾರ್ಪೆಟ್, ಗ್ಲುಟೆನ್ ಫ್ರೀ ವೆಡ್ಡಿಂಗ್ ಕೇಕ್ ಇದಕ್ಕೆಲ್ಲ ಹಣಕಾಸಿನ ನೆರವು ಕೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...