alex Certify
ಕನ್ನಡ ದುನಿಯಾ       Mobile App
       

Kannada Duniya

ಹೊರಹೋಗಿ ಬರುವಷ್ಟರಲ್ಲಿ ರಸ್ತೆಯಾಗಿ ಬದಲಾಗಿತ್ತು ಮನೆ

ರಷ್ಯಾದ ದಂಪತಿ ಅಲ್ಲೇ ಸಮೀಪದ ನಗರಕ್ಕೆ ಕೆಲಸದ ನಿಮಿತ್ತ ತೆರಳಿದ್ರು. ಕೆಲಸ ಮುಗಿಸಿಕೊಂಡು ಆಗಸ್ಟ್ 31ರಂದು ವಾಪಸ್ ಬಂದಿದ್ದಾರೆ. ಮನೆಗೆ ಬಂದ ದಂಪತಿಗೆ ಆಘಾತವೇ ಕಾದಿತ್ತು. ಅವರು ವಾಸವಿದ್ದ ಮನೆ ರಸ್ತೆಯಾಗಿ ಬದಲಾಗಿತ್ತು.

ರಿಯಾ ನೋವೋಸ್ತಿ ಮತ್ತಾಕೆಯ ಪತಿ ಯಾವಾಗಲೂ ಅಲ್ಲಿ ಉಳಿದುಕೊಳ್ತಿರಲಿಲ್ಲ. ಆಗಾಗ ಬಂದು ಹೋಗ್ತಾ ಇದ್ರು. ಆದ್ರೆ ಅವರು ಇಲ್ಲದ ಸಮಯದಲ್ಲಿ ಅಧಿಕಾರಿಗಳು ಹೇಳದೇ ಕೇಳದೆ ಅವರ ಮನೆಯನ್ನೇ ಧ್ವಂಸ ಮಾಡಿದ್ದಾರೆ.

ಆ ಜಾಗದಲ್ಲಿ ರಸ್ತೆ ನಿರ್ಮಿಸಿ ಬಿಟ್ಟಿದ್ದಾರೆ. ಮನೆ ಇದ್ದ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಿಲ್ಲ ಅಂತಾನೇ ಅಧಿಕಾರಿಗಳು ಮೊದಲು ವಾದಿಸ್ತಾ ಇದ್ರು. ಕೊನೆಗೆ ಮನೆ ಮಾಲೀಕ ಸಂಬಂಧಪಟ್ಟ ದಾಖಲೆಗಳನ್ನೆಲ್ಲ ಸಲ್ಲಿಸಿದ್ದಾನೆ.

ಆದ್ರೆ ಇದುವರೆಗೂ ಅಧಿಕಾರಿಗಳಿಂದ ಸ್ಪಷ್ಟನೆ ಸಿಕ್ಕಿಲ್ಲ. ಪರಿಹಾರವೂ ದೊರೆತಿಲ್ಲ. ಹಾಗಾಗಿ ನ್ಯಾಯಕ್ಕಾಗಿ ಆಗ್ರಹಿಸಿ ಅದೇ ರಸ್ತೆ ಮಧ್ಯದಲ್ಲಿ ಧರಣಿ ಕೂರಲು ದಂಪತಿ ನಿರ್ಧರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...