alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಬಂಧ ಬೆಳೆಸಿದ್ದ ಜೋಡಿ ವಿಡಿಯೋ ಹೆಲಿಕಾಪ್ಟರ್ ನಲ್ಲಿ ರೆಕಾರ್ಡ್

img-8_555_071917041336

ಇಂಗ್ಲೆಂಡ್ ನ ಇಬ್ಬರು ಪೊಲೀಸ್ ಅಧಿಕಾರಿಗಳು ಹಾಗೂ ಇಬ್ಬರು ಪೈಲೆಟ್ ಗಳ ವಿಚಾರಣೆ ಕೋರ್ಟ್ ನಲ್ಲಿ ಶುರುವಾಗಿದೆ. ಯಾರ್ಕ್ಷೈರ್ ಪ್ರದೇಶದಲ್ಲಿ ಶಾರೀರಿಕ ಸಂಬಂಧ ಬೆಳೆಸಿದ್ದ ಜೋಡಿಯ ವಿಡಿಯೋವನ್ನು ಮಾಡಿದ್ದ ಆರೋಪದ ಮೇಲೆ ಅಧಿಕಾರಿಗಳ ವಿಚಾರಣೆ ನಡೆಯುತ್ತಿದೆ.

ಮ್ಯಾಥ್ಯೂ ಲ್ಯೂಕಾಸ್, ಲೀ ವಾಲ್ಸ್, ಮ್ಯಾಥ್ಯೂ ಲುಸಿಮೋರ್ ಮತ್ತು ಮಲ್ಕೋಮ್ ರೀವ್ಸ್ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ವಿಡಿಯೋ ಮಾಡಿದ್ದಾರೆ. ತೋಟದಲ್ಲಿ ಶಾರೀರಿಕ ಸಂಬಂಧ ಬೆಳೆಸಿದ್ದ ಜೋಡಿಯ ವಿಡಿಯೋ ಮಾಡಿದ್ದ ಅಧಿಕಾರಿಗಳ ವಿರುದ್ಧ ಸರ್ಕಾರದ ಆಸ್ತಿ ದುರುಪಯೋಗ ಮಾಡಿದ ಆರೋಪವಿದೆ. ಆದ್ರೆ ಅಧಿಕಾರಿಗಳು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಅನ್ಯ ಪೊಲೀಸ್ ಅಧಿಕಾರಿಯೊಬ್ಬ ಇದನ್ನು ಒಪ್ಪಿಕೊಂಡಿದ್ದಾನೆ.

ಅಧಿಕಾರಿಗಳು ಹೆಲಿಕಾಪ್ಟರ್ ನಲ್ಲಿ ಉತ್ತಮ ಗುಣಮಟ್ಟದ ಕ್ಯಾಮರಾ ಬಳಸಿ ವಿಡಿಯೋ ಮಾಡಿದ್ದಾರೆ. ಇದು ಗೌಪ್ಯತೆಯ ಉಲ್ಲಂಘನೆಯಾಗುತ್ತದೆ. ಬ್ರಿಟನ್ ನಲ್ಲಿ ಇದಕ್ಕಿಂತ ಮೊದಲೂ ಇಂತ ಕೆಲ ಪ್ರಕರಣಗಳು ಬೆಳಕಿಗೆ ಬಂದಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...