alex Certify
ಕನ್ನಡ ದುನಿಯಾ       Mobile App
       

Kannada Duniya

‘ಮೊದಲ ರಾತ್ರಿ’ ಚಿತ್ರೀಕರಿಸಲು ವಿಡಿಯೋಗ್ರಾಫರ್ ಬೇಕಂತೆ ಈ ಜೋಡಿಗೆ…!

ವಿಚಿತ್ರ ಎನಿಸಿದ್ರು ಇದು ಸತ್ಯ. ಮೊದಲ ರಾತ್ರಿಯ ಏಕಾಂತಕ್ಕೆ ಯಾರಿಂದಲು ಭಂಗ ಬರಬಾರದು ಅನ್ನೋದು ಲೋಕಾರೂಢಿ ಮಾತು. ಆದ್ರೆ ಇಂಗ್ಲೆಂಡ್ ನ ಜೋಡಿಯೊಂದು ತಮ್ಮ ಮೊದಲ ರಾತ್ರಿಯನ್ನು ಚಿತ್ರೀಕರಿಸುವ ವಿಡಿಯೋ ಗ್ರಾಫರ್ ಬೇಕಾಗಿದ್ದಾನೆ ಅಂತ ಮೂರನೇ ವ್ಯಕ್ತಿಗಾಗಿ ಜಾಹೀರಾತನ್ನು ನೀಡಿದೆ.

ಸೆಪ್ಟೆಂಬರ್ ನಲ್ಲಿ ಮದುವೆಯಾಗಲಿರುವ ಇಂಗ್ಲೆಂಡ್ ನ ಜೋಡಿಯೊಂದು ವೃತ್ತಿಪರ ವಿಡಿಯೋಗ್ರಾಫರ್ ಬೇಕಾಗಿದ್ದಾನೆ. ರಾತ್ರಿ 1 ಗಂಟೆಯಿಂದ 3ರವರೆಗೆ ಆತ ಮೊದಲ ರಾತ್ರಿಯನ್ನ ಚಿತ್ರೀಕರಣ ಮಾಡಬೇಕಿದೆ. 2000 ಡಾಲರ್ ನ್ನ ಆತನಿಗೆ ನೀಡಲಿದ್ದೇವೆ ಅಂತ ಜೋಡಿಯೊಂದು ಇಂಗ್ಲೆಂಡ್ ನ ಬಾರ್ಕ್ ಡಾಟ್ ಕಾಮ್ ಎಂಬ ವೆಬ್ಸೈಟ್ ನಲ್ಲಿ ಜಾಹೀರಾತು ನೀಡಿದೆ.

ನಾವಿಬ್ಬರು ಪ್ರೀತಿಸಿ ಮದುವೆಯಾಗುತ್ತಿದ್ದೇವೆ. ನಮ್ಮ ಮದುವೆಯ ಸಂಭ್ರಮ ಕೇವಲ ದಿನಕ್ಕಷ್ಟೆ ಸೀಮಿತವಾಗೋದ್ರಲ್ಲಿ ನಮಗೆ ನಂಬಿಕೆ ಇಲ್ಲ. ಪ್ರೀತಿಯ ಪ್ರತಿ ಘಳಿಗೆಯಲ್ಲೂ ಸಂಭ್ರಮ ಇರಬೇಕು ಮತ್ತು ಆ ಸಂಭ್ರಮ ಜೀವನದುದ್ದಕ್ಕೂ ಇರಬೇಕು ಅಂತ ನಾವು ನಂಬಿದ್ದೀವಿ. ರಾತ್ರಿಯ ಆ ಸಂಭ್ರಮದ ಕ್ಷಣಗಳನ್ನು ಚಿತ್ರೀಕರಿಸೋಕೆ ನಮಗೆ ಒಬ್ಬ ವೃತ್ತಿಪರ ವಿಡಿಯೋಗ್ರಾಫರ್ ಬೇಕು ಅಂತ ಆ ಜೋಡಿ ತಿಳಿಸಿದೆ. ಇದನ್ನು ಓದಿದ ಜನರು ಹುಚ್ಚೋ ಬೆಪ್ಪೋ..? ಕಾಲ ಹೇಗೆ ಬದಲಾಗ್ತಿದೆಯಪ್ಪಾ ಅಂತ ನಗಾಡುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...