alex Certify
ಕನ್ನಡ ದುನಿಯಾ       Mobile App
       

Kannada Duniya

ತುಕ್ಕು ಹಿಡಿದ ಕಬ್ಬಿಣದ ಬಾಕ್ಸ್ ನಲ್ಲಿ ಏನಿತ್ತು ಗೊತ್ತಾ…?

ನ್ಯೂಯಾರ್ಕ್ ನ ಸ್ಟಾಟೆನ್ ಐಲ್ಯಾಂಡ್ ನಲ್ಲಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ವಜ್ರಾಭರಣ ಮತ್ತು ಹಣವಿರುವ ಕಬ್ಬಿಣದ ಬಾಕ್ಸ್ ಒಂದು ಸಿಕ್ಕಿದೆ. ಇದರಲ್ಲಿರುವ ವಜ್ರಾಭರಣಗಳ ಬೆಲೆ ಬರೋಬ್ಬರಿ 52 ಸಾವಿರ ಡಾಲರ್ ಆಗಿದೆ.

ಈ ಐಲ್ಯಾಂಡ್ ನಲ್ಲಿ ವಾಸವಿದ್ದ ಮ್ಯಾಥ್ಯೂ ಮತ್ತು ಮರಿಯಾ ಕೊಲೊನೊ ಭೂಕುಸಿತ ಸಂಭವಿಸುವುದನ್ನು ತಡೆಯಲು, ತಮ್ಮ ಮನೆಯ ಹಿತ್ತಿಲಿನಲ್ಲಿ ಇದ್ದ ಕೆಲವು ಮರಗಳನ್ನು ತೆಗೆಯಲು ನಿರ್ಧರಿಸಿದ್ರು. ಇದಕ್ಕಾಗಿ ಸ್ಥಳೀಯ ಕಂಪನಿಗೆ ತಿಳಿಸಿದ್ರು. ಹೀಗಾಗಿ ಕಂಪನಿಯವರು ಹಿತ್ತಿಲಲ್ಲಿ ಮರಗಳನ್ನು ತೆಗೆಯುವಾಗ ತುಕ್ಕು ಹಿಡಿದ ಕಬ್ಬಿಣದ ಬಾಕ್ಸ್ ಸಿಕ್ಕಿದೆ.

ಬಾಕ್ಸ್ ನೋಡಿದ ಮ್ಯಾಥ್ಯೂ, ವಿದ್ಯುತ್ ನ ಅಥವಾ ಇನ್ನಾವುದಾದ್ರೂ ಬಾಕ್ಸ್ ಇರಬೇಕೆಂದು ಭಾವಿಸಿದ್ರು. ಆದ್ರೆ ಅದನ್ನ ನಿಧಾನವಾಗಿ ಒಡೆದು ತೆಗೆದಾಗ ಆ ದಂಪತಿ ನಿಜಕ್ಕೂ ದಿಗ್ಬ್ರಮೆಗೊಳಗಾಗಿದ್ದರು. ಕಾರಣ ಅದರಲ್ಲಿ ಹಣ, ವಜ್ರ, ಜೇಡ, ಡಜನ್ ಗಟ್ಟಲೆ ಬಂಗಾರದ ಉಂಗುರಗಳು ಇದ್ದವು. ಹಾಗೆಯೇ ಈ ಬಾಕ್ಸ್ ಹಿಂದೆ ಒಂದು ಪೇಪರ್ ತುಂಡಿತ್ತು. ಅದ್ರಲ್ಲಿ ಪಕ್ಕದ ಮನೆಯವರ ವಿಳಾಸವಿತ್ತು.

ತಕ್ಷಣವೇ ಈ ದಂಪತಿ ಪಕ್ಕದ ಮನೆಗೆ ಹೋಗಿ ನಿಮ್ಮ ಮನೆಯಲ್ಲಿ ದರೋಡೆ ನಡೆದಿತ್ತಾ ಎಂದು ಕೇಳಿದ್ದಾರೆ. ಅದಕ್ಕೆ ಹೌದು ಎಂದ ಅವರು, 2011 ರಲ್ಲಿ ತಮ್ಮ ಮನೆಯಲ್ಲಿ ದರೋಡೆ ನಡೆದಿದ್ದರ ಬಗ್ಗೆ ತಿಳಿಸಿದ್ದಾರೆ. ನಂತರ ಕಬ್ಬಿಣದ ಬಾಕ್ಸ್ ನಲ್ಲಿ ಸಿಕ್ಕ ಎಲ್ಲಾ ಚಿನ್ನಾಭರಣ, ಹಣವನ್ನು ಮ್ಯಾಥ್ಯೂ ದಂಪತಿ ಅವರಿಗೆ ಒಪ್ಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...