alex Certify
ಕನ್ನಡ ದುನಿಯಾ       Mobile App
       

Kannada Duniya

ಮನುಷ್ಯರ ಮಾಂಸದಲ್ಲಿ ಉಪ್ಪಿನಕಾಯಿ ಮಾಡಿದ್ರು ದಂಪತಿ..!

ರಷ್ಯಾದ ಜೋಡಿಯೊಂದು ಮನುಷ್ಯರನ್ನು ಕೊಂದು ಮಾಂಸ ತಿನ್ನುತ್ತಿರುವುದನ್ನು ಒಪ್ಪಿಕೊಂಡಿದೆ. ಜೈಲಿನಲ್ಲಿ ಬಂಧಿಯಾಗಿರುವ ಜೋಡಿ 18 ವರ್ಷಗಳ ನಂತ್ರ ತಪ್ಪೊಪ್ಪಿಕೊಂಡಿದೆ. ಈ ಜೋಡಿ ಒಂದಲ್ಲ ಎರಡಲ್ಲ 30 ಮಂದಿಯನ್ನು ಕೊಲೆ ಮಾಡಿ ಅವ್ರ ಮಾಂಸ ತಿಂದಿದ್ರಂತೆ.

ರಷ್ಯಾ ಸಿಟಿಯೊಂದರಲ್ಲಿ ವಾಸವಾಗಿದ್ದ ದಿಮಿತ್ರಿ ಹಾಗೂ ಆತನ ಹೆಂಡತಿ ನತಾಲಿಯಾ ಇಬ್ಬರು ನರಭಕ್ಷಕರಾಗಿದ್ದರು. ಮನುಷ್ಯರನ್ನು ಕೊಂದ ನಂತ್ರ ಮಾಂಸವನ್ನು ಮನೆಯಲ್ಲಿರುವ ದೊಡ್ಡ ಫ್ರೀಜರ್ ನಲ್ಲಿ ಸಂಗ್ರಹಿಸಿಡುತ್ತಿದ್ದರು. ನಂತ್ರ ಪ್ರತಿದಿನ ಅದನ್ನು ತಿನ್ನುತ್ತಿದ್ದರು. ಮನುಷ್ಯನ ಮಾಂಸದಿಂದ ಉಪ್ಪಿನ ಕಾಯಿಯನ್ನೂ ಇವರು ಮಾಡಿದ್ದರು.

1999ರಲ್ಲಿ ಅನುಮಾನದ ಮೇಲೆ ಇವರನ್ನು ಪೊಲೀಸರು ಬಂಧಿಸಿದ್ದರು. ಮನೆ ಮೇಲೆ ದಾಳಿ ನಡೆಸಿದಾಗ 8 ಮಂದಿಯ ಮೂಳೆಗಳು ಸಿಕ್ಕಿದ್ದವು. ಫ್ರೀಜರ್ ನಲ್ಲಿಯೂ ಸಾಕಷ್ಟು ಮಾಂಸ ಸಿಕ್ಕಿತ್ತು. ನತಾಲಿಯಾ ಈ ಶವಗಳನ್ನಿಟ್ಟುಕೊಂಡು ಪ್ರ್ಯಾಕ್ಟೀಸ್ ಮಾಡುವುದಾಗಿ ಹೇಳಿದ್ದಳು.

ವಿಚಾರಣೆ ನಡೆಸಿದ್ದ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. ಜೈಲಿನಲ್ಲಿದ್ದರೂ ತಮ್ಮ ತಪ್ಪು ಒಪ್ಪಿಕೊಳ್ಳದ ಜೋಡಿ ಈಗ ತಪ್ಪೊಪ್ಪಿಕೊಂಡಿದೆ. 30ಕ್ಕೂ ಹೆಚ್ಚು ಜನರನ್ನು ಕೊಲೆ ಮಾಡಿ ಮಾಂಸ ತಿಂದಿರುವುದಾಗಿ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...