alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡಿಸಲಿನಂತಿರುವ ಮನೆಯ ಒಳಾಂಗಣ ನೋಡಿ ದಂಗಾದ ಜನ

ವಾಷಿಂಗ್ಟನ್ ಹಿಡನ್ ವ್ಯಾಲಿ ಜಂಗಲ್ ನಲ್ಲಿರುವ ಗುಡಿಸಲೊಂದು ಚರ್ಚೆಯ ವಿಷಯವಾಗಿದೆ. ಈ ಗುಡಿಸಲನ್ನು ಮಾರುವುದಾಗಿ ಮಾಲೀಕ ಹೇಳಿದ್ದಾನೆ. ಸುಮಾರು 5 ಕೋಟಿ ರೂಪಾಯಿಗೆ ಇದನ್ನು ಮಾರಾಟ ಮಾಡಲು ನಿರ್ಧರಿಸಿದ್ದಾನೆ. ಗುಡಿಸಲಿನಂತೆ ಕಾಣುವ ಈ ಮನೆಗೆ ಇಷ್ಟೊಂದು ಬೆಲೆಯಾ ಎಂಬ ಪ್ರಶ್ನೆ ಅನೇಕರನ್ನು ಕಾಡಿತ್ತು.

ಒಳಗೆ ಹೋದ ಜನರು ಮನೆ ನೋಡಿ ದಂಗಾದ್ರು. ಹೊರಗೆ ಗುಡಿಸಲಿನಂತೆ ಕಾಣುವ ಮನೆಯನ್ನು ಒಳಗೆ ಬಂಗಲೆಯಂತೆ ನಿರ್ಮಾಣ ಮಾಡಲಾಗಿತ್ತು. ಸ್ನೋ ವೈಟ್ನಂತೆ ಮನೆಯನ್ನು ನಿರ್ಮಿಸಲಾಗಿತ್ತು. ಮನೆಯಲ್ಲಿ ನಾಲ್ಕು ಬೆಡ್ ರೂಂ ಇದೆ. ಮನೆಯ ಹಿಂಭಾಗವನ್ನು ದಟ್ಟವಾದ ಪೊದೆಗಳು ಮರೆಮಾಚಿವೆ.

ರಿಯಲ್ ಎಸ್ಟೇಟ್ ವೆಬ್ಸೈಟ್ ಜಾನ್ ಎಲ್ ಸ್ಕಾಟ್ ಪ್ರಕಾರ ಈ ಮನೆ ಮಾಲೀಕ ಮೊದಲು ಮನೆಯ ಬೆಲೆಯನ್ನು 5.30 ಕೋಟಿಗೆ ಮಾರಾಟ ಮಾಡಲು ಮುಂದಾಗಿದ್ದ. ಆದ್ರೆ ಇಷ್ಟು ದೊಡ್ಡ ಮೊತ್ತ ನೀಡಿ ಮನೆ ಖರೀದಿಗೆ ಯಾರೂ ಮುಂದಾಗಿರಲಿಲ್ಲ. ಹಾಗಾಗಿ ಈಗ ಬೆಲೆ ಇಳಿಸಿದ್ದಾನೆ ಎನ್ನಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...