alex Certify
ಕನ್ನಡ ದುನಿಯಾ       Mobile App
       

Kannada Duniya

ಸೂಪರ್ ಮಾರ್ಕೆಟ್ ನಲ್ಲಿ ಪ್ರತ್ಯಕ್ಷವಾಯ್ತು ಮೊಸಳೆ

ಅಮೆರಿಕದ ಟೆಕ್ಸಾಸ್ ನ ಸೂಪರ್ ಮಾರ್ಕೆಟ್ ಒಂದರ ಬಳಿ ಎಂಟು ಅಡಿಯ ಮೊಸಳೆಯೊಂದು ಪ್ರತ್ಯಕ್ಷವಾಗಿದೆ.

ಸೂಪರ್ ಮಾರ್ಕೆರ್ಟ್ ನ ಪಾರ್ಕಿಂಗ್ ಲಾಟ್ ನಲ್ಲಿ ಕಂಡು ಬಂದ ಮೊಸಳೆಯನ್ನ ಅರಣ್ಯ ಸಿಬ್ಬಂದಿ ಹರಸಾಹಸ ಪಟ್ಟು ಹಿಡಿದ ವಿಡಿಯೋ ಈಗ ವೈರಲ್ ಆಗಿದೆ.

ವಾಲ್ಮಾರ್ಟ್ ಸೂಪರ್ ಮಾರ್ಕೆರ್ಟ್ ಶಾಪಿಂಗ್ ಮಾಲ್ ಬಳಿ ಮೊಸಳೆಯನ್ನ ನೋಡಿದ ಸಾರ್ವಜನಿಕರು ಕೂಡಲೇ ಅರಣ್ಯ ಇಲಾಖೆಗೆ ಸುದ್ದಿ ಕೊಟ್ಟರು. ತಕ್ಷಣ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಮೊಸಳೆಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹತ್ತಿರದಲ್ಲೇ ಇರುವ ಕೊಳವೊಂದರಿಂದ ಇದು ಬಂದಿರಬಹುದು ಅಂತ ಸಿಬ್ಬಂದಿ ಅಂದಾಜಿಸಿದ್ದಾರೆ.

ಸೂಪರ್ ಮಾರ್ಕೆಟ್ ಬಳಿ ಹಿಡಿದ ಮೊಸೆಳೆಯನ್ನ ಸಿಬ್ಬಂದಿ ಆನಂತರದಲ್ಲಿ ಟೆಕ್ಸಾಸ್ ನ ವನ್ಯಧಾಮಕ್ಕೆ ತೆಗೆದುಕೊಂಡು ಹೋಗಿ ಬಿಟ್ಟಿದ್ದಾರೆ. ಅರಣ್ಯ ಸಿಬ್ಬಂದಿ ಮೊಸಳೆಯನ್ನ ಹಿಡಿಯುವ ವಿಡಿಯೋ ಈಗ ಸಾಕಷ್ಟು ಸುದ್ದಿಮಾಡ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...