alex Certify
ಕನ್ನಡ ದುನಿಯಾ       Mobile App
       

Kannada Duniya

4 ಟನ್ ಕಿತ್ತಳೆ ಸಮೇತ ಪೊಲೀಸರಿಗೆ ಸಿಕ್ಕಿಬಿದ್ದ ಕಳ್ಳರು

ಫ್ರಾನ್ಸ್ ನ ಸಿವಿಲ್ಲೆ ಎಂಬಲ್ಲಿ ಕಿತ್ತಳೆ ಹಣ್ಣುಗಳನ್ನು ಕದ್ದು ಕಾರಿನಲ್ಲಿ ಸಾಗಿಸಲಾಗಿದೆ. ಕದ್ದಿರೋದು ಹತ್ತೋ ಇಪ್ಪತ್ತೋ ಕೆಜಿ ಅಲ್ಲ, ಬರೋಬ್ಬರಿ 4 ಟನ್. ಅಂದ್ರೆ 4000 ಕೆಜಿ. ಪೊಲೀಸರು ಈ ಕಿತ್ತಳೆ ಕಳ್ಳರನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.

ಹಣ್ಣುಗಳನ್ನು ಸಾಗಿಸುತ್ತಿದ್ದ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಐವರನ್ನು ಬಂಧಿಸಿದ್ದಾರೆ. ಪೊಲೀಸರ ಗಸ್ತು ವಾಹನ ಕಾಣ್ತಿದ್ದಂತೆ ಮೂರು ಕಾರುಗಳು ದಿಢೀರನೆ ಮಾರ್ಗ ಬದಲಾಯಿಸಿದ್ದವು. ಇದನ್ನು ನೋಡಿ ಖಾಕಿಗಳಿಗೆ ಅನುಮಾನ ಬಂದಿತ್ತು.

ಕಾರುಗಳನ್ನು ಫಾಲೋ ಮಾಡಿ ತಡೆದಾಗ, ರಾಶಿ ರಾಶಿ ಕಿತ್ತಳೆ ಹಣ್ಣುಗಳನ್ನು ಕದ್ದು ಸಾಗಿಸುತ್ತಿರುವುದು ಪತ್ತೆಯಾಗಿದೆ. ಓರ್ವ ಚಾಲಕ ಕಾರಿನ ಸಮೇತ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಹಣ್ಣುಗಳಿಂದ ತುಂಬಿದ್ದ ಇನ್ನೆರಡು ಕಾರುಗಳು ಪೊಲೀಸರಿಗೆ ಸಿಕ್ಕಿಬಿದ್ದಿವೆ.

ಕಿತ್ತಳೆ ಹಣ್ಣುಗಳನ್ನು ಎಲ್ಲಿಂದ ಕದ್ದಿದ್ದೇವೆ ಎಂಬ ಬಗ್ಗೆ ಬಂಧಿತರು ಪೊಲೀಸರಿಗೆ ಮಾಹಿತಿ ನೀಡುತ್ತಿಲ್ಲ. ಬಹಳ ದೂರದಿಂದ ಬಂದಿದ್ದೇವೆ, ಅಲ್ಲಲ್ಲಿ ಹಣ್ಣುಗಳನ್ನು ಖರೀದಿಸಿದ್ದೇವೆ ಅಂತಾ ಸುಳ್ಳು ಹೇಳ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...