alex Certify
ಕನ್ನಡ ದುನಿಯಾ       Mobile App
       

Kannada Duniya

ವೃದ್ದನನ್ನು ಹೆಗಲ ಮೇಲೆ ಹೊತ್ತು ರಸ್ತೆ ದಾಟಿಸಿದ ಪೊಲೀಸ್

ಪೊಲೀಸರು ಹಗಲು ರಾತ್ರಿಯೆನ್ನದೇ ತಮ್ಮ ಕರ್ತವ್ಯ ನಿಭಾಯಿಸುತ್ತಾರೆ. ಮೂರು ದಿನಗಳ ಹಿಂದಷ್ಟೇ ಭಾರತದ ಮುಂಬೈನಲ್ಲಿ ಟ್ರಾಫಿಕ್ ಪೇದೆಯೊಬ್ಬರು ಸುರಿವ ಮಳೆಯಲ್ಲೂ ಕಾರ್ಯ ನಿರ್ವಹಿಸಿದ್ದ ವಿಡಿಯೋ ವೈರಲ್ ಆಗಿತ್ತು. ಈಗ ಚೀನಾದ ಪೊಲೀಸರೊಬ್ಬರ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಚೈನಾದ ಸಿಚುಯಾನ್ ನಗರದಲ್ಲಿ ಟ್ರಾಫಿಕ್ ಪೊಲೀಸರೊಬ್ಬರು, ರಸ್ತೆ ದಾಟಲು ಪರದಾಡುತ್ತಿದ್ದ ವೃದ್ದ ವ್ಯಕ್ತಿಯನ್ನ ಹೆಗಲ ಮೇಲೆ ಹೊತ್ತು ಟ್ರಾಫಿಕ್ ಸಿಗ್ನಲ್ ದಾಟಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ವೃದ್ಧರೊಬ್ಬರು ಟ್ರಾಫಿಕ್ ಸಿಗ್ನಲ್ ದಾಟುವಾಗ ಗ್ರೀನ್ ಸಿಗ್ನಲ್ ಬರುತ್ತೆ. ಆಗ ವೃದ್ದ ವ್ಯಕ್ತಿ ಸಿಗ್ನಲ್ ನ ಮಧ್ಯದಲ್ಲಿ ವಾಹನ ದಟ್ಟಣೆ ನಡುವೆ ಸಿಕ್ಕಿ ಹಾಕಿಕೊಂಡಿದ್ದಾರೆ. ಆಗ ಅಲ್ಲಿಗೆ ಆಗಮಿಸುವ ಪೊಲೀಸ್ ಅಧಿಕಾರಿ, ವೃದ್ದ ವ್ಯಕ್ತಿಯನ್ನು ಹೆಗಲ ಮೇಲೆ ಕೂರಿಸಿಕೊಂಡು ಹೋಗುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Traffic police carries elderly across busy road on his back.

Traffic police carries elderly across busy road on his back.June 4th in Mianyang, Sichuan, an elderly on crutches was about to walk across a busy road. A traffic police who found him struggling, went to lifted him on his back and walked cross the road.

Posted by PearVideo on Wednesday, June 6, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...