alex Certify
ಕನ್ನಡ ದುನಿಯಾ       Mobile App
       

Kannada Duniya

ಥೈಲ್ಯಾಂಡ್ ನ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿದೆ ಭವ್ಯ ರಾಮಮಂದಿರ

ಭಾರತದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕನಸಾಗಿಯೇ ಉಳಿದಿದೆ. ರಾಮ ಮಂದಿರ ನಿರ್ಮಾಣಕ್ಕೆ ಅನೇಕರು ಹೋರಾಟ ನಡೆಸುತ್ತಲೇ ಇದ್ದಾರೆ. ಆದ್ರೆ ಥೈಲ್ಯಾಂಡ್ ನ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಕಾರ್ಯ ಶುರುವಾಗಿದೆ.

ಭಾರತದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರ ಸುಪ್ರೀಂ ಕೋರ್ಟ್ ನಲ್ಲಿದೆ. ರಾಮ ಭಕ್ತರಾದ ನಾವು ಥೈಲ್ಯಾಂಡ್ ನಲ್ಲಿ ರಾಮ ಮಂದಿರ ನಿರ್ಮಾಣ ಮಾಡ್ತಿದ್ದೇವೆಂದು ಬ್ಯಾಂಕಾಕ್ ನ ರಾಮ ಜನ್ಮಭೂಮಿ ನಿರ್ಮಾಣ ನ್ಯಾಸ್ ಟ್ರಸ್ಟ್ ಅಧ್ಯಕ್ಷ ಮಹಂತ್ ಜನ್ಮೇಜಯ್ ಶರಣ್ ಹೇಳಿದ್ದಾರೆ.

ಬುಧವಾರ ಮಹಂತ್ ರಾಮಮಂದಿರ ನಿರ್ಮಾಣ ಮಾಡಲಿರುವ ಸ್ಥಳಕ್ಕೆ ಬಂದು ಧಾರ್ಮಿಕ ಕಾರ್ಯಗಳನ್ನು ಪೂರೈಸಿ, ನಿರ್ಮಾಣ ಕಾರ್ಯಕ್ಕೆ ಶುಭ ಕೋರಿದ್ದಾರೆ. ರಾಮನ ಬಗ್ಗೆ ವಿದೇಶಿಗರಿಗೂ ಮಾಹಿತಿ ಸಿಗಲಿ ಎನ್ನುವ ಕಾರಣಕ್ಕೆ ರಾಮ ಮಂದಿರ ನಿರ್ಮಾಣ ಮಾಡ್ತಿರುವುದಾಗಿ ಅವ್ರು ಹೇಳಿದ್ದಾರೆ.

ಥೈಲ್ಯಾಂಡ್ ನಲ್ಲಿಯೂ ಅಯೋಧ್ಯೆ ಹೆಸರಿನ ಊರಿದೆ. ಅಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವಾಗಲಿದೆ. ಶೀಘ್ರವೇ ನಿರ್ಮಾಣ ಕಾರ್ಯ ಮುಗಿಯಲಿದೆ. ಭಾರತೀಯರು ಕೂಡ ಇಲ್ಲಿ ರಾಮ ಮಂದಿರ ನಿರ್ಮಾಣವಾಗ್ತಿರುವ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆಂದು ಮಹಂತ್ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...