alex Certify
ಕನ್ನಡ ದುನಿಯಾ       Mobile App
       

Kannada Duniya

ರೆಹಮಾನ್ ಹಾಡು ಕೇಳಿ ವಾಪಾಸ್ ಕೇಳ್ತಿದ್ದಾರೆ ಹಣ..!

rahman

ಲಂಡನ್ ನ ವೆಂಬ್ಲೆಯಲ್ಲಿ ಜುಲೈ 8 ರಂದು ಎ.ಆರ್. ರೆಹಮಾನ್ ಅವರ ಮ್ಯೂಸಿಕ್ ಕಾನ್ಸರ್ಟ್ ನಡೆದಿತ್ತು. ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡವರೆಲ್ಲ ಈಗ ನಮ್ಮ ಟಿಕೆಟ್ ಹಣವನ್ನು ವಾಪಸ್ ಕೊಡಿ ಎನ್ನುತ್ತಿದ್ದಾರೆ. ಟ್ವಿಟ್ಟರ್ ನಲ್ಲಿ ತಮ್ಮ ಅಸಮಾಧಾನವನ್ನೂ ಹೊರಹಾಕಿದ್ದಾರೆ.

ಕಾನ್ಸರ್ಟ್ ವೀಕ್ಷಿಸಲು ಬಂದವರೆಲ್ಲ ಬಹುತೇಕ ಉತ್ತರ ಭಾರತ ಮೂಲದ ಯುವಕ- ಯುವತಿಯರು. ಸಹಜವಾಗಿಯೇ ಅವರಲ್ಲಿ ಹಿಂದಿ ಹಾಡುಗಳನ್ನು ಕೇಳುವ ಉತ್ಸಾಹವಿತ್ತು. ಆದ್ರೆ ರೆಹಮಾನ್ ಹಿಂದಿ ಹಾಡುಗಳಿಗಿಂತ್ಲೂ ಹೆಚ್ಚಾಗಿ ತಮಿಳು ಸಾಂಗ್ ಗಳನ್ನು ಹಾಡಿದ್ದಾರೆ.

ಇದು ಕಾನ್ಸರ್ಟ್ ಗೆ ಬಂದಿದ್ದ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಕೆಲವರು ನಮ್ಮ ಹಣ ವಾಪಸ್ ಕೊಡಿ ಅಂತಾ ಟ್ವೀಟ್ ಮಾಡಿದ್ರೆ, ಇನ್ನು ಕೆಲವರು ಮತ್ತೆ ರೆಹಮಾನ್ ಕಾನ್ಸರ್ಟ್ ಗೆ ಅಪ್ಪಿತಪ್ಪಿಯೂ ಹೋಗೋದಿಲ್ಲ ಎನ್ನುತ್ತಿದ್ದಾರೆ. ರೆಹಮಾನ್ ರನ್ನು ಬಾಲಿವುಡ್ ಸಂಗೀತ ನಿರ್ದೇಶಕ ಅಂತಾ ಕರೆಯೋದ್ರಲ್ಲಿ ಅರ್ಥವೇ ಇಲ್ಲ ಎನ್ನುತ್ತಿದ್ದಾರೆ ಇನ್ನೊಂದಷ್ಟು ಮಂದಿ.

ಕಾನ್ಸರ್ಟ್ ನಲ್ಲಿ ರೆಹಮಾನ್ 16 ಹಿಂದಿ ಹಾಡುಗಳು ಹಾಗೂ 12 ತಮಿಳು ಹಾಡುಗಳನ್ನು ಹಾಡಿದ್ದಾರಂತೆ. ತಮಿಳು ಪ್ರೇಮಿಗಳು ಮಾತ್ರ ರೆಹಮಾನ್ ಪರವಾಗಿ ಟ್ವೀಟ್ ಮಾಡಿದ್ದಾರೆ. ಒಂದು ಗಂಟೆಯ ಕಾಲ ಬೇರೆ ಭಾಷೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲವೇ ಅಂತಾ ಪ್ರಶ್ನಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...