alex Certify
ಕನ್ನಡ ದುನಿಯಾ       Mobile App
       

Kannada Duniya

ಮೆಟ್ರೋದಲ್ಲೇ ಮೈಮರೆತ ಯುವಕ

hnkg-metr

ಹಾಂಕಾಂಗ್: ಇತ್ತೀಚೆಗೆ ಹೆಚ್ಚಿನ ಯುವಕರಿಗೆ ಮೊಬೈಲ್, ಸೋಷಿಯಲ್ ಮೀಡಿಯಾ, ವಿಡಿಯೋಗೇಮ್ ಇದ್ದರಷ್ಟೇ ಸಾಕು, ಬೇರೆ ಪ್ರಪಂಚದ ಅರಿವೇ ಇರುವುದಿಲ್ಲ.

ಹೀಗೆ ವಿಡಿಯೋ ಗೇಮ್ ನಲ್ಲಿ ತಲ್ಲೀನನಾಗಿದ್ದ ಯುವಕನೊಬ್ಬ ಬೆತ್ತಲಾಗಿಯೇ ಎಂ.ಟಿ.ಆರ್. ಟ್ರೈನ್ ನಲ್ಲಿ ಸಂಚರಿಸಿದ್ದಾನೆ.

ಶೂ ಹೊರತಾಗಿ ಯುವಕನ ಮೈಮೇಲೆ ಏನೂ ಇರಲಿಲ್ಲ. ವಿಡಿಯೋ ಗೇಮ್ ನಲ್ಲಿ ಮುಳುಗಿ ಹೋಗಿದ್ದ ಯುವಕನಿಗೆ ತನ್ನ ಮೈಮೇಲೆ ಬಟ್ಟೆ ಇಲ್ಲವೆಂಬುದೂ ಅರಿವಿಗೆ ಬಂದಿಲ್ಲ.

ಈ ಯುವಕನ ಅವತಾರ ಕಂಡು ರೈಲಿನಲ್ಲಿದ್ದವರೆಲ್ಲ ಕಂಗಾಲಾಗಿದ್ದಾರೆ. ಕೊನೆಗೆ ಭದ್ರತಾ ಸಿಬ್ಬಂದಿ ಆಗಮಿಸಿ ಆತನಿಗೆ ಬಟ್ಟೆ ಕೊಟ್ಟಿದ್ದಾರೆ.

ಸಾರ್ವಜನಿಕವಾಗಿ ನಗ್ನನಾಗಿ ಕಾಣಿಸಿಕೊಂಡ ಕಾರಣಕ್ಕೆ ಯುವಕನ ವಿರುದ್ಧ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ. ಯುವಕ ಮೆಟ್ರೋದಲ್ಲಿ ಬೆತ್ತಲೆಯಾಗಿ ಕಾಣಿಸಿಕೊಂಡಿರುವ ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...