alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಮರಾ ಕಣ್ಣಿಂದ ತಪ್ಪಿಸಿಕೊಳ್ಳಲು ಈತ ಮಾಡಿದ್ದ ಖತರ್ನಾಕ್ ಪ್ಲಾನ್

ಇಂಗ್ಲೆಂಡ್ ನ ಯಾರ್ಕ್ ಶೈರ್ ನಲ್ಲೊಂದು ವಿಚಿತ್ರ ಪ್ರಕರಣ ನಡೆದಿದೆ. ರಸ್ತೆಯಲ್ಲಿ ಅಳವಡಿಸಲಾಗಿದ್ದ ವಾಹನಗಳ ವೇಗ ಮಿತಿ ಗುರುತಿಸುವ ಕ್ಯಾಮರಾ ಕಣ್ಣಿನಿಂದ ತಪ್ಪಿಸಿಕೊಳ್ಳಲು ಖತರ್ನಾಕ್ ಪ್ಲಾನ್ ಮಾಡಿದ್ದ ಉದ್ಯಮಿಯೊಬ್ಬ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

67 ವರ್ಷದ ಟಿಮೋಥಿ ಹಿಲ್ ಸಿಕ್ಕಿ ಬಿದ್ದವನಾಗಿದ್ದು, ಈತ ಕಂಪನಿಯೊಂದರ ನಿರ್ದೇಶಕನೆಂದು ಹೇಳಲಾಗಿದೆ. ಟಿಮೋಥಿ ಹಿಲ್ ತನ್ನ ರೇಂಜ್ ರೋವರ್ ಕಾರಿಗೆ ಲೇಸರ್ ಜಾಮರ್ ಸಾಧನ ಅಳವಡಿಸಿಕೊಂಡಿದ್ದು, ಇದರಿಂದಾಗಿ ವೇಗ ಮಿತಿ ಗುರುತಿಸುವ ಕ್ಯಾಮರಾಗಳು ಈತನ ಕಾರಿನ ವೇಗ ಗುರುತಿಸಲು ವಿಫಲವಾಗುತ್ತಿದ್ದವು.

ಆದರೆ ಅತಿಯಾದ ಆತ್ಮವಿಶ್ವಾಸದಿಂದ ಟಿಮೋಥಿ ಹಿಲ್ ಪ್ರತಿ ಬಾರಿ ಕ್ಯಾಮರಾ ಕಣ್ಣಿನಿಂದ ತಪ್ಪಿಸಿಕೊಂಡಾಗಲೂ ತನ್ನ ತೋರು ಬೆರಳು ಮೇಲೆ ಮಾಡಿದ್ದು, ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದು ಪೊಲೀಸರಿಗೆ ಅನುಮಾನ ಮೂಡಿಸಿದ್ದು, ಈತನ ಮನೆಗೆ ಪೊಲೀಸರು ಭೇಟಿ ನೀಡಿದಾಗ ಲೇಸರ್ ಜಾಮರ್ ಸಾಧನವನ್ನು ಎಸೆದಿದ್ದರೂ ಈತನ ಕೃತ್ಯ ಬಯಲಾಗಿತ್ತು. ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ವೇಳೆ 8 ತಿಂಗಳ ಜೈಲು ವಾಸದ ಶಿಕ್ಷೆ ಹಾಗೂ ಒಂದು ವರ್ಷ ಕಾಲ ಆತನ ಡ್ರೈವಿಂಗ್ ಲೈಸೆನ್ಸ್ ರದ್ದು ಮಾಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...