alex Certify
ಕನ್ನಡ ದುನಿಯಾ       Mobile App
       

Kannada Duniya

ಅಚ್ಚರಿ ! ಕಲ್ಲಾಗಿ ಬದಲಾಗುತ್ತಿದೆ ಬಾಲಕನ ದೇಹ

stone_skin_boy

‘ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ’ ಎಂಬ ಜನಪ್ರಿಯ ಹಾಡಿನ ಸಾಲು ನೆನಪಿಸುವ ಘಟನೆಯೊಂದು ಅಮೆರಿಕದಲ್ಲಿ ನಡೆದಿದೆ. ಇಲ್ಲಿನ ಬಾಲಕನೊಬ್ಬ ದೇಹ ಕಲ್ಲಿನ ರೂಪಕ್ಕೆ ಪರಿವರ್ತನೆಯಾಗುತ್ತಿದೆ. ಏನಿದು ಪ್ರಕರಣ ಎಂಬ ಮಾಹಿತಿಯನ್ನು ತಿಳಿಯಲು ಮುಂದೆ ಓದಿ.

ಅಮೆರಿಕದ ಕೊಲರಾಡೊದಲ್ಲಿರುವ ಬಾಲಕನಿಗೆ ದೇಹದಲ್ಲಿ ಬದಲಾವಣೆಗಳಾಗುತ್ತಿದ್ದು, ಕಲ್ಲಿನ ರೂಪ ಪಡೆದುಕೊಳ್ಳುತ್ತಿದೆ. ಜೇಡನ್ ರೋಜರ್ಸ್ ಎಂಬ ಈ ಬಾಲಕನಿಗೆ ಅಪರೂಪದಲ್ಲಿಯೇ ಅಪರೂಪ ಎನ್ನಬಹುದಾದ ಕಾಯಿಲೆ ಆವರಿಸಿದೆ. ಮೊದಲಿಗೆ ಚರ್ಮ ಗಟ್ಟಿಯಾದಂತಾಗಿ ಬಾಲಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಬರಬರುತ್ತಾ ಅದು, ಉಲ್ಬಣವಾಗಿ ಬಾಲಕ ಜೇಡನ್ ರೋಜರ್ಸ್ ಮೈಮೇಲೆಲ್ಲಾ ಕಲ್ಲಿನಂತಹ ರಚನೆಗಳು ಕಾಣಿಸಿಕೊಳ್ಳತೊಡಗಿವೆ. ಇದರಿಂದಾಗಿ ಬಾಲಕ ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಈ ರೀತಿಯ ಕಾಯಿಲೆಗೆ ಇನ್ನೂ ಚಿಕಿತ್ಸೆ ಕಂಡುಹಿಡಿದಿಲ್ಲವಾದ್ದರಿಂದ ಕಲ್ಲಿನಂತಹ ರಚನೆ ಬೆಳೆಯದಂತೆ ಕೀಮೋಥೆರಪಿ ಮಾಡಲಾಗುತ್ತಿದೆ. ಇಂತಹ ಕಾಯಿಲೆ ಬಂದವರಿಗೆ ಮೈಮೇಲೆ ಕಲ್ಲಿನಂತಹ ರಚನೆ ಕಾಣಿಸಿಕೊಂಡು ಓಡಾಡಲು ಕೂಡ ಸಾಧ್ಯವಾಗುವುದಿಲ್ಲ. ವಿಶ್ವದಲ್ಲಿ ಇದುವರೆಗೆ 14 ಮಂದಿಗೆ ಮಾತ್ರ ಈ ರೀತಿಯ ಚರ್ಮದ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡಿವೆ. ಆದರೆ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...