alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಕನ ಜೊತೆ ಬಲವಂತವಾಗಿ ಸಂಬಂಧ ಬೆಳೆಸಿದ್ಲು ವಿದ್ಯಾರ್ಥಿನಿ

sex_1500968414_618x347

ಅಮೆರಿಕಾದ ಉತ್ತರ ಕೆರೊಲಿನಾದಲ್ಲಿ ಚಿಕ್ಕ ಹುಡುಗನಿಗೆ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕನ ತಾಯಿ ಹಾಗೂ ಸಂಸ್ಥೆಯೊಂದರ ಹೇಳಿಕೆ  ಮೇರೆಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಜಾಮೀನು ರಹಿತ ವಾರೆಂಟ್ ಜಾರಿಯಾಗ್ತಿದ್ದಂತೆ ಯುವತಿ ಪೊಲೀಸರಿಗೆ ಶರಣಾಗಿದ್ದಾಳೆ.

ಯುವತಿಯಿಂದ 14 ಕೋಟಿ ಬಾಂಡ್ ಬರೆಸಿಕೊಂಡಿರುವ ಪೊಲೀಸರು ತನಿಖೆ ಶುರುಮಾಡಿದ್ದಾರೆ. ಘಟನೆ ನಡೆದಿರುವುದು ಉತ್ತರ ಕೆರೊಲಿನಾದಲ್ಲಿ. ಆರೋಪಿ 20 ವರ್ಷದ ಟೇಲರ್ ಮೊಸ್ಲಿ ಕೆರೊಲಿನಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ. ಕೆಲ ದಿನಗಳ ಹಿಂದೆ ಮೊಸ್ಲಿ ಪಾರ್ಟ್ ಟೈಂ ಕೆಲಸ ಮಾಡ್ತಿದ್ದಳು. ಅಲ್ಲಿ ಮೊಸ್ಲಿ  ಸ್ನೇಹಿತನಿಂದ 14 ವರ್ಷದ ಹುಡುಗನ ಪರಿಚಯವಾಗಿದೆ.

ಇಬ್ಬರು ಒಳ್ಳೆ ಸ್ನೇಹಿತರಾಗಿದ್ದರು. ಆದ್ರೆ ಕಳೆದ ಮೇ ನಲ್ಲಿ ಆರೋಪಿ ಮೊಸ್ಲಿ 14 ವರ್ಷದ ಬಾಲಕನನ್ನು ರೇಪ್ ಮಾಡಿದ್ದಾಳೆ. ಇದು ಕೆಲ ದಿನಗಳ ನಂತ್ರ ಬಾಲಕನ ತಾಯಿಗೆ ತಿಳಿದಿದೆ. ಸಾಮಾಜಿಕ ಸಂಘಟನೆ ಸಹಾಯ ಪಡೆದು ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ವಾರೆಂಟ್ ಜಾರಿ ಮಾಡಿದ್ದರಿಂದ ಯುವತಿ ಕೋರ್ಟ್ ಮುಂದೆ ಹಾಜರಾಗಿದ್ದಾಳೆ.

ಒಂದು ವೇಳೆ ಮೊಸ್ಲಿ ಅಪರಾಧಿ ಎಂಬುದು ಸಾಭೀತಾದಲ್ಲಿ 25 ವರ್ಷ ಜೈಲು ಶಿಕ್ಷೆಯಾಗಲಿದೆ. ಇದಕ್ಕಿಂತ ಮೊದಲು ಮದ್ಯಪಾನ ಮಾಡಿ ಬೈಕ್ ಚಲಾಯಿಸಿದ್ದ ಯುವತಿ 60 ದಿನ ಜೈಲು ಶಿಕ್ಷೆ ಅನುಭವಿಸಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...