alex Certify
ಕನ್ನಡ ದುನಿಯಾ       Mobile App
       

Kannada Duniya

ಗರ್ಭಿಣಿಯರಾದ್ರೂ ಪರವಾಗಿಲ್ಲ, ಕಾಲೇಜ್ ಬಿಡಬೇಡಿ

pragnent

ವಿದ್ಯಾರ್ಥಿನಿಯರು ಕೆಲವೊಮ್ಮೆ ಓದುವ ಸಂದರ್ಭದಲ್ಲೇ, ಮದುವೆಯಾಗಿ ಗರ್ಭಿಣಿಯರಾಗಿಬಿಟ್ಟರೆ, ಕಾಲೇಜ್ ನಿಂದ ದೂರವಾಗುತ್ತಾರೆ. ಕೆಲವರು ಕಾಲೇಜಿಗೆ ಹೋಗಲೇಬೇಕಾದ ಪರಿಸ್ಥಿತಿ ಎದುರಾದರೆ ಕಷ್ಟಪಟ್ಟು ಹೋಗುತ್ತಾರೆ. ಅಲ್ಲದೇ, ಕಾಲೇಜುಗಳಿಗೆ ಪ್ರವೇಶ ಪಡೆಯುವಾಗ ಹಲವು ನಿಯಮಗಳನ್ನು ಪಾಲಿಸಬೇಕಿರುತ್ತದೆ.

ದಕ್ಷಿಣ ಕೊರಿಯಾದ ಸಿಯೋಲ್ ನಲ್ಲಿ ಕಾಲೇಜ್ ವಿದ್ಯಾರ್ಥಿನಿಯರು ಪ್ರೀತಿ, ಮನೆಯವರ ಒತ್ತಡ ಮೊದಲಾದ ಕಾರಣಗಳಿಂದ ಬಹುಬೇಗನೆ ಮದುವೆಯಾಗಿ ಗರ್ಭಿಣಿಯರಾದ ಕಾರಣಕ್ಕೆ ಕಾಲೇಜ್ ನಿಂದ ದೂರವಾಗುತ್ತಿದ್ದರು. ಅವರು ಶಿಕ್ಷಣ ಮುಂದುವರೆಸುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಲ್ಲಿನ ಉನ್ನತ ಶಿಕ್ಷಣ ಇಲಾಖೆ ಸುತ್ತೋಲೆಯೊಂದನ್ನು ಹೊರಡಿಸಿದ್ದು, ಇನ್ನು ಮುಂದೆ ಗರ್ಭಿಣಿಯರೂ ಕೂಡ ಕಾಲೇಜಿಗೆ ಬರಬಹುದೆಂದು ತಿಳಿಸಿದೆ. ಮದುವೆಯಾದ ಹೆಣ್ಣುಮಕ್ಕಳಿಗೆ ಮಾತ್ರ ಇದು ಅನ್ವಯಿಸುತ್ತದೆ ಎಂದು ಹೇಳಿದೆ.

ವಿದ್ಯಾರ್ಥಿನಿಯರು ಓದುವಾಗಲೇ ಮದುವೆಯಾಗಿ, ಮಕ್ಕಳಾದರೆ ಅವರಿಗೆ ಹೆರಿಗೆ ರಜೆ ಕೂಡ ನೀಡಲಾಗುವುದು. ಒಂದು ಸೆಮಿಸ್ಟರ್ ಅವಧಿಯಲ್ಲಿ ಅವರು ರಜೆ ಪಡೆದುಕೊಳ್ಳಬಹುದಾಗಿದೆ. ಇದುವರೆಗೂ ದಕ್ಷಿಣ ಕೊರಿಯಾದಲ್ಲಿ ಶಿಕ್ಷಣ ಮುಗಿದ ನಂತರವೇ ಮದುವೆಯಾಗಬೇಕಿತ್ತು. ಈಗ ಕಾನೂನು ಬದಲಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...