alex Certify
ಕನ್ನಡ ದುನಿಯಾ       Mobile App
       

Kannada Duniya

ಟಿಂಡರ್ ಆಪ್ ನಲ್ಲಿ ಇಂಥ ಸಹಾಯ ಕೇಳಿ ಸುದ್ದಿಯಾದ್ಲು ಹುಡುಗಿ

ಟಿಂಡರ್, ಡೇಟಿಂಗ್ ಆಪ್ ಎಂದು ಪರಿಗಣಿಸಲಾಗಿದೆ. ಈ ಆಪ್ ಮೂಲಕ ಜನರು ಅಪರಿಚಿತರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ತಾರೆ. ಆದ್ರೆ ಟಿಂಡರ್ ಆಪ್ ನಲ್ಲಿ ಹುಡುಗಿಯೊಬ್ಬಳು ಇಟ್ಟ ಸಹಾರ ಆಶ್ಚರ್ಯ ಹುಟ್ಟಿಸಿದೆ. ಹುಡುಗಿ ಹಾಕಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಕೆ ಪೋಸ್ಟನ್ನು ಜನ ಇಷ್ಟಪಡ್ತಿದ್ದಾರೆ.

19 ವರ್ಷದ ಹುಡುಗಿ ಮೋಡಿ ಮೆಕ್ ಮಾಸ್ಟರ್ ಟೆಂಡರ್ ಪ್ರೊಪೈಲ್ ನಲ್ಲಿ ಫೋಟೋ ಹಾಕಿದ್ದಾಳೆ. ಈ ಫೋಟೋದಲ್ಲಿ ಗಣಿತ ಪರೀಕ್ಷೆಗೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾಳೆ. ‘I NEED HELP WITH CALCULUS’ ಎಂಬ ಬೋರ್ಡ್ ಕೈನಲ್ಲಿ ಹಿಡಿದು ನಿಂತಿದ್ದಾಳೆ. ಇದ್ರ ಜೊತೆ ಟ್ವೀಟರ್ ನ ಸ್ಕ್ರೀನ್ ಶಾಟ್ ಹಾಕಿದ್ದಾಳೆ. ಅದ್ರಲ್ಲಿ ನಾಳೆ  CALCULUS ಪರೀಕ್ಷೆಯಿದ್ದು, ಸಹಾಯ ಮಾಡಿ ಎಂದು ಮೆಕ್ ಮಾಸ್ಟರ್ ವಿನಂತಿ ಮಾಡಿದ್ದಾಳೆ. ಗಣಿತ ಗೊತ್ತಿರುವವರು ಹೇಗೆ ಓದಬೇಕೆನ್ನುವ ಬಗ್ಗೆ ಸಲಹೆ ನೀಡಿ ಎಂದಿದ್ದಾಳೆ.

ಮೆಕ್ ಮಾಸ್ಟರ್ ಈ ಫೋಟೋವನ್ನು ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ. ಅನೇಕರು ರೀಟ್ವಿಟ್ ಮಾಡಿದ್ದಾರೆ. ಟಿಂಡರ್ ಆ್ಯಪ್ ನಲ್ಲಿ ಇಂತಹ ಸಹಾಯ ಕೇಳಿದ ಹುಡುಗಿಗೆ ಭೇಷ್ ಎಂಬ ಕಮೆಂಟ್ಸ್ ಕೂಡ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...