alex Certify
ಕನ್ನಡ ದುನಿಯಾ       Mobile App
       

Kannada Duniya

ಜಿರಲೆ ದ್ವೇಷಿಗಳು ಓದಲೇ ಬೇಕಾದ ಸುದ್ದಿ

cockroach-milk_27_07_2016

ಮನೆಯ ಅಕ್ಕಪಕ್ಕದಲ್ಲಿ ಜಿರಲೆ ನೋಡಿದ್ರೂ ಕೆಲವರಿಗೆ ಊಟ ಸೇರೋದಿಲ್ಲ. ಹಾಗಿರುವಾಗ ಈ ಜಿರಲೆ ಬಗ್ಗೆ ಆಶ್ಚರ್ಯ ಪಡುವಂತಹ ಸುದ್ದಿಯೊಂದು ಹೊರಬಿದ್ದಿದೆ. ಇನ್ನು ಮುಂದೆ ಜಿರಲೆ ದ್ವೇಷಿಗಳು ಅದನ್ನು ಪ್ರೀತಿಸುವ ಕಾಲ ಬಂದ್ರೂ ಬರಬಹುದು. ಯಾಕೆಂದ್ರೆ ಈ ಜಿರಳೆ ಹಾಲು ಮುಂದಿನ ದಿನಗಳಲ್ಲಿ ಸೂಪರ್ ಆಹಾರವಾಗಲಿದೆ ಎಂದು ವಿಜ್ಞಾನಿಗಳು ಹೇಳ್ತಿದ್ದಾರೆ.

ನೀವು ನಂಬಿ ಇಲ್ಲ ಬಿಡಿ, ಅಂತರಾಷ್ಟ್ರೀಯ ಸಂಶೋಧಕರ ತಂಡ ಇದನ್ನು ಬಲವಾಗಿ ನಂಬಿದೆ. ಭಾರತದ ಸ್ಟೆಮ್ ಸೆಲ್ ಬಯಾಲಜಿ ಮತ್ತು ರಿಜನರೇಟಿವ್ ಮೆಡಿಸಿನ್ಸ್ ಇನ್ಸ್ಟಿಟ್ಯೂಟ್, ಭವಿಷ್ಯದಲ್ಲಿ ಜಿರಲೆ ಹಾಲು ಸೂಪರ್ ಆಹಾರವಾಗಲಿದೆ ಎನ್ನುತ್ತಿದೆ.

ವಿಜ್ಞಾನಿಗಳ ಪ್ರಕಾರ  ಪೆಸಿಫಿಕ್ ಜೀರುಂಡೆ ಜಿರಲೆ ಹಾಲಿನಲ್ಲಿ ಮನುಷ್ಯನಿಗೆ ಅಗತ್ಯವಿರುವ ಪೌಷ್ಠಿಕಾಂಶ ಸಿಗಲಿದೆಯಂತೆ. ಉಳಿದ ಜಿರಲೆಗಳು ಮೊಟ್ಟೆ ಇಟ್ಟರೆ ಈ ಪೆಸಿಫಿಕ್ ಜೀರುಂಡೆ ಜಿರಲೆ ಮರಿಗಳಿಗೆ ಜನ್ಮ ನೀಡುತ್ತದೆ. ಜಿರಲೆಯ ಭ್ರೂಣದಲ್ಲಿ ಪ್ರೋಟಿನ್ ಕ್ರಿಸ್ಟಲ್ ನೋಡಿದ ವಿಜ್ಞಾನಿಗಳು ದಂಗಾಗಿ ಹೋಗಿದ್ದಾರೆ.

ಭಾರತ, ಫ್ರಾನ್ಸ್, ಜಪಾನ್, ಕೆನಡಾ ಮತ್ತು ರಾಷ್ಟ್ರೀಯ ಆರೋಗ್ಯ ಸಂಸ್ಥೆ ಅಮೇರಿಕಾ ವಿಜ್ಞಾನಿಗಳ ತಂಡ ಇದನ್ನು ಒಪ್ಪಿಕೊಂಡಿದೆ. ದನದ ಹಾಲಿನಲ್ಲಿರುವ ಪೌಷ್ಠಿಕಾಂಶ ಜಿರಲೆ ಹಾಲಿನಲ್ಲಿಯೂ ಇರುತ್ತದೆ ಎಂದಿದ್ದಾರೆ. ಅಲ್ಲದೆ ಇದರಲ್ಲಿ ಹೆಚ್ಚಿನ ಕ್ಯಾಲೋರಿ ಕೂಡ ಕಂಡುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...