alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನದ ಹೊರಗಿತ್ತು ಸಹ ಪೈಲಟ್ ನ ಅರ್ಧ ದೇಹ…!

ವಿಮಾನಯಾನ ಎಷ್ಟು ಸುರಕ್ಷಿತ ಅನ್ನೋ ಪ್ರಶ್ನೆ ಎದುರಾಗತೊಡಗಿದೆ. ಕಾರಣ ವಿಮಾನದಲ್ಲಿ ದಿನಕ್ಕೊಂದು ಅವಘಡಗಳು ನಡೆಯುತ್ತಲೇ ಇವೆ. ಇಂತಹ ಘಟನೆಗಳು ಜನರ ಸುರಕ್ಷತೆ ಮತ್ತು ಭದ್ರತೆಗೆ ಅಪಾಯವನ್ನುಂಟು ಮಾಡುತ್ತಿವೆ.

ಇದಕ್ಕೆ ಸಿಚುವಾನ್ ಏರ್ ಲೈನ್ಸ್ ನಲ್ಲಿ ನಡೆದ ಈ ಘಟನೆ ಸಾಕ್ಷಿ. ಸಹ ಪೈಲಟ್ ಕೂತಿದ್ದ ಕಾಕ್ ಪಿಟ್ ನ ಕಿಟಕಿ ಒಡೆದ ಪರಿಣಾಮ, ವಿಮಾನವನ್ನು ತುರ್ತುಭೂಸ್ಪರ್ಶ ಮಾಡಲಾಗಿದೆ.

ವಿಮಾನ ಭೂಮಿಯಿಂದ 32 ಸಾವಿರ ಅಡಿ ದೂರ ಹಾರಿತ್ತು. ಆಗ ಇದ್ದಕ್ಕಿದ್ದಂತೆ ಯಾವುದೇ ಮುನ್ಸೂಚನೆ ಇಲ್ಲದೆ ಕಾಕ್ ಪಿಟ್ ಕಿಟಕಿ ಒಡೆದಿದೆ. ಇದ್ರಿಂದಾಗಿ ಗಾಳಿಯ ರಭಸಕ್ಕೆ ಸಹ ಪೈಲಟ್ ದೇಹ ಕಿಟಕಿಯಿಂದ ಅರ್ಧ ಹೊರ ಹೋಗಿದೆ. ಅಲ್ಲದೆ ಕಾಕ್ ಪಿಟ್ ನಿಂದ ಬರುತ್ತಿದ್ದ ಗಾಳಿಯಿಂದಾಗಿ ವಿಮಾನದಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗತೊಡಗಿದವು. ರೇಡಿಯೋ ಕೂಡಾ ಕೇಳದಂತಾಯಿತು.

ಈ ಘಟನೆಯಿಂದ ವಿಮಾನದಲ್ಲಿದ್ದ ಪ್ರಯಾಣಿಕರು ತೀವ್ರ ಆಘಾತಕ್ಕೊಳಗಾದ್ರು. ಹೀಗಾಗಿ ಅಪಾಯದ ಮುನ್ಸೂಚನೆ ಅರಿತ ಮುಖ್ಯ ಪೈಲಟ್ ತಕ್ಷಣವೇ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿ, ಆಗಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿ, ಪ್ರಯಾಣಿಕರ ಪಾಲಿನ ಹೀರೋ ಆಗಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...