alex Certify
ಕನ್ನಡ ದುನಿಯಾ       Mobile App
       

Kannada Duniya

ಸಹ ಪ್ರಯಾಣಿಕನನ್ನು ನೆನೆದ ಮಹಿಳೆ.…ಆತ ಮಾಡಿದ ಸಹಾಯ ಏನ್ ಗೊತ್ತಾ?

ಹೆತ್ತವರಿಗೆ ಹೆಗ್ಗಣ ಮುದ್ದು ನಿಜ. ಆದ್ರೆ ಬೇರೆ ಕಡೆ ಹೋದಾಗ, ಮಕ್ಕಳು ಮಾಡುವ ತುಂಟಾಟಗಳು, ಪೋಷಕರನ್ನ ಹೈರಾಣಾಗಿಸುತ್ತವೆ. ಇನ್ನು ಮಕ್ಕಳನ್ನ ವಿಮಾನದಲ್ಲಿ ಕರೆದುಕೊಂಡು ಹೋಗುವುದು ಹೆತ್ತವರಿಗೆ ಒಂದು ದುಃಸ್ವಪ್ನವೇ ಸರಿ.

ಕಾರಣ ತಮ್ಮ ಮಕ್ಕಳು ಕಿರಿಕಿರಿ ಮಾಡಿದ್ರೆ, ಇತರ ಪ್ರಯಾಣಿಕರಿಗೆ ತೊಂದರೆಯಾಗುತ್ತೆ. ಅವರೇನು ತಿಳಿದುಕೊಳ್ತಾರೋ ಅನ್ನೋ ಗಾಬರಿ ಇರುತ್ತೆ. ಹೀಗೆಯೇ ಅಮೆರಿಕಾದ ಜೆಸ್ಸಿಕಾ ಎಂಬ ಮಹಿಳೆ ತನ್ನ ಮೂರು ವರ್ಷ ವಯಸ್ಸಿನ ಕ್ಯಾರೋಲಿನಾ ಮತ್ತು ನಾಲ್ಕು ತಿಂಗಳ ಮಗು ಅಲೆಕ್ಸಾಂಡರ್ ರನ್ನ ಕರೆದುಕೊಂಡು ಅಮೆರಿಕಾ ಏರ್ ಲೈನ್ಸ್ ವಿಮಾನದಲ್ಲಿ  ವಿಲ್ಲಿಂಗ್ಟನ್ ನಾರ್ಥ್ ಕೊರಲಿಯಾಗೆ ಪ್ರಯಾಣಿಸುತ್ತಿದ್ದಳು.

ಹಸಿವಿನಿಂದ ಬಳಲುತ್ತಿದ್ದ ಅಲೆಕ್ಸಾಂಡರ್ ಗೆ ಪ್ರಯಾಣಿಸಲು ಮನಸ್ಸಿರಲಿಲ್ಲ. ಹೀಗಾಗಿ ರಗಳೆ ಮಾಡ್ತಿತ್ತು. ಜೊತೆಗೆ ಕ್ಯಾರೋಲಿನ್ ಕೂಡಾ ವಿಮಾನ ಹತ್ತುತ್ತಿದ್ದಂತೆ ಹಠ ಹಿಡಿದಳು. ಇಬ್ಬರು ಮಕ್ಕಳನ್ನು ಸುಧಾರಿಸಲು ಜೆಸ್ಸಿಕಾ ಹೈರಾಣಾಗಿ ಹೋದಳು. ಆಗ ನೆರವಿಗೆ ಬಂದ ಸಹ ಪ್ರಯಾಣಿಕ ಟಾಡ್ ವಾಕರ್, ಕ್ಯಾರೋಲಿನ್ ಳನ್ನು ತನ್ನ ಬಳಿ ಕೂರಿಸಿಕೊಂಡು, ಆಕೆಗೆ ಇಷ್ಟವಾದ ಚಲನಚಿತ್ರವನ್ನು ಹಾಕಿಕೊಟ್ಟು, ಆ ಮಗುವನ್ನು ಸಮಾಧಾನಪಡಿಸಿದ. ತನ್ನ ಸಹ ಪ್ರಯಾಣಿಕನ ಸಹಾಯವನ್ನು ನನೆದ ಜೆಸ್ಸಿಕಾ ತನ್ನ ಫೇಸ್ ಬುಕ್ ನಲ್ಲಿ  ಕೃತಜ್ಞತೆ ತಿಳಿಸಿದ್ದಾಳೆ. ಇದೀಗ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...