alex Certify
ಕನ್ನಡ ದುನಿಯಾ       Mobile App
       

Kannada Duniya

ಸಾವಿರ ಅಡಿ ಮೇಲಿಂದ ಬಿದ್ದು ಪರ್ವತಾರೋಹಿಯ ದುರಂತ ಸಾವು

ಅಮೆರಿಕದ ಒರೆಗಾನ್ ನಲ್ಲಿರೋ ಮೌಂಟ್ ಹೂಡ್ ಶಿಖರ ಏರಿದ್ದ ಸಾಹಸಿಯೊಬ್ಬ ದುರಂತ ಸಾವಿಗೀಡಾಗಿದ್ದಾನೆ. 1000 ಅಡಿ ಮೇಲಿಂದ ಬಿದ್ದು ಮೃತಪಟ್ಟಿದ್ದಾನೆ. ಮೌಂಟ್ ಹೂಡ್ ನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಇನ್ನೂ 7-8 ಪರ್ವತಾರೋಹಿಗಳು ಅಲ್ಲೇ ಸಿಕ್ಕಿಹಾಕಿಕೊಂಡಿದ್ದಾರೆ.

ಅವರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ. ಬೆಳಗ್ಗೆ 10.30 ರ ವೇಳೆಗೆ ಪರ್ವತಾರೋಹಿ ಹಾಗ್ಸ್ ಬ್ಯಾಕ್ ಎಂಬ ಪ್ರದೇಶದಿಂದ ಕೆಳಕ್ಕೆ ಬಿದ್ದಿದ್ದ. ಅದು ನೆಲದಿಂದ ಸುಮಾರು 1000 ಅಡಿ ಎತ್ತರದಲ್ಲಿದೆಯಂತೆ. ಸುಮಾರು 1 ಗಂಟೆ ವೇಳೆಗೆ ಆಗಮಿಸಿದ ರಕ್ಷಣಾ ಸಿಬ್ಬಂದಿ ಪರ್ವತಾರೋಹಿಯನ್ನು ಆಸ್ಪತ್ರೆಗೆ ಕರೆದೊಯ್ದರು.

ಆದ್ರೆ ಅಷ್ಟರಲ್ಲಾಗ್ಲೇ ಆತ ಕೊನೆಯುಸಿರೆಳೆದಿದ್ದ. ಹಗ್ಗದ ಸಹಾಯವೂ ಇಲ್ಲದೇ ಆತ ಶಿಖರ ಏರುತ್ತಿದ್ದ. ಉಳಿದ ಪರ್ವತಾರೋಹಿಗಳು ಮೌಂಟ್ ಹುಡ್ ನ 11,240 ಅಡಿ ಎತ್ತರದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅವರ ಬಳಿ ಇನ್ನೊಂದು ದಿನಕ್ಕಾಗುವಷ್ಟು ಮಾತ್ರ ನೀರು ಹಾಗೂ ಆಹಾರವಿದೆ ಅಂತಾ ಹೇಳಲಾಗ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...