alex Certify
ಕನ್ನಡ ದುನಿಯಾ       Mobile App
       

Kannada Duniya

ದುರಾದೃಷ್ಟವೆಂದರೆ ಈತನದ್ದೇ ನೋಡಿ

usa driver

ಪ್ರಾಣಾಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾದರೂ, ಮರುಕ್ಷಣದಲ್ಲೇ ಅನಾಹುತದಲ್ಲಿ ಅಪಾಯ ತಂದುಕೊಳ್ಳುವ ಪ್ರಕರಣಗಳ ಬಗ್ಗೆ ಕೇಳಿರುತ್ತೀರಿ. ಇಲ್ಲೊಬ್ಬ ಚಾಲಕ ಪ್ರಾಣಾಪಾಯದಿಂದ ಸ್ವಲ್ಪದರಲ್ಲೇ, ಪಾರಾಗಿ ಬಂದಿದ್ದಾನೆ. ಆದರೆ, ಮರುಕ್ಷಣದಲ್ಲಿ ಅಪಾಯಕ್ಕೆ ಸಿಲುಕಿದ್ದಾನೆ.

ಅಮೆರಿಕದ ಕ್ಯಾಲಿಫೋರ್ನಿಯಾ ಹೆದ್ದಾರಿಯಲ್ಲಿ ಮಾಲಿಬು ಬೆಟ್ಟದ ಕಣಿವೆಯ ಸಮೀಪ ಈ ಘಟನೆ ನಡೆದಿದೆ. ಎಸ್.ಯು.ವಿ. ವಾಹನವೊಂದರ ಚಾಲಕನಿಗೆ ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದೆ. ಇದರಿಂದಾಗಿ, ವಾಹನ ತಡೆಗೋಡೆಗೆ ಡಿಕ್ಕಿ ಹೊಡೆದಿದ್ದು, ಕಣಿವೆಗೆ ಬೀಳುವ ಹಂತಕ್ಕೆ ಬಂದಿದೆ. ತಡೆಗೋಡೆಗೆ ಚಕ್ರಗಳು ಸಿಕ್ಕಿಹಾಕೊಂಡಿದ್ದರಿಂದ, ವಾಹನ ತುದಿಗೆ ಬಂದು ನಿಂತಿದೆ. ಸ್ವಲ್ಪ ಯಡವಟ್ಟಾಗಿದ್ದರೂ, ವಾಹನ ಕಣಿವೆಯ ಪ್ರಪಾತಕ್ಕೆ ಬೀಳಬೇಕಿತ್ತು.

ತುದಿಯಲ್ಲಿ ಅಲ್ಲಾಡುತ್ತಿದ್ದ ವಾಹನದಿಂದ ಜಾಗರೂಕತೆಯಿಂದ ಇಳಿದು, ರಸ್ತೆಗೆ ಬಂದ ಚಾಲಕನಿಗೆ ಅದೇ ಮಾರ್ಗದಲ್ಲಿ ಬರುತ್ತಿದ್ದ ಬಸ್ ಡಿಕ್ಕಿ ಹೊಡೆದಿದೆ. ಈತನ ದುರಾದೃಷ್ಟವೋ ಏನೋ, ಪ್ರಾಣಾಪಾಯದಿಂದ ಜಸ್ಟ್ ಮಿಸ್ ಆಗಿ ಬಂದರೂ ಬಸ್ ಗೆ ಸಿಲುಕಿದ್ದಾನೆ. ಗಾಯಗೊಂಡಿರುವ ಆತನನ್ನು ಕ್ಯಾಲಿಫೋರ್ನಿಯಾ ಹೈವೇ ಸುರಕ್ಷತಾ ದಳದ ಸಿಬ್ಬಂದಿ ಆಸ್ಪತ್ರೆಗೆ ಸೇರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...