alex Certify
ಕನ್ನಡ ದುನಿಯಾ       Mobile App
       

Kannada Duniya

ಬಡವ ಆಸೆ ಪಟ್ಟಿದ್ದೆಲ್ಲವೂ ಸಿಕ್ತು ಉಡುಗೊರೆಯಾಗಿ..!

saudi

ಸೌದಿ ಅರೇಬಿಯಾದಲ್ಲಿ ಕೆಲಸ ಮಾಡ್ತಾ ಇದ್ದ ಬಾಂಗ್ಲಾದೇಶದ ಪ್ರಜೆಯೊಬ್ಬನಿಗೆ ಉಡುಗೊರೆಗಳ ಸುರಿಮಳೆಯಾಗಿದೆ. ಲೇಟೆಸ್ಟ್ ಸ್ಮಾರ್ಟ್ ಫೋನ್, ಚಿನ್ನಾಭರಣ ಹೀಗೆ ದುಬಾರಿ ಗಿಫ್ಟ್ ಗಳು ಬಂದಿವೆ.

ಈತನ ಹೆಸರು ನುಜ್ರೌಲ್ ಅಬ್ದುಲ್ ಕರೀಂ, ಇವನ ತಿಂಗಳ ದುಡಿಮೆ 187 ಡಾಲರ್. ಆಭರಣ ಮಳಿಗೆಯೊಂದರಲ್ಲಿ ಈತ ಎಲ್ಲವನ್ನೂ ಆಸೆಗಣ್ಣಿನಿಂದ ನೋಡುತ್ತಿದ್ದ. ಅದನ್ನೆಲ್ಲ ಕೊಳ್ಳಲು ಸಾಧ್ಯವಿಲ್ಲ ಎಂಬ ಅಸಹಾಯಕತೆ ಅವನ ಕಣ್ಣಿನಲ್ಲಿತ್ತು.

ಅಬ್ದುಲ್ ಕರೀಂನ ಫೋಟೋವನ್ನು ಸಾಮಾಜಿಕ ಜಾಲ ತಾಣದ ಬಳಕೆದಾರನೊಬ್ಬ ಇನ್ ಸ್ಟಾಗ್ರಾಮ್ ನಲ್ಲಿ ಹಾಕಿದ್ದ. ಅವನ ಅಸಹಾಯಕತೆ ಬಗ್ಗೆ ವ್ಯಂಗ್ಯವಾಡಿದ್ದ. ಈ ಪೋಸ್ಟ್ ಗೆ ಸೌದಿ ಪ್ರಜೆಗಳಿಂದ ಭಾರೀ ಮಟ್ಟದಲ್ಲಿ ಪ್ರತಿಕ್ರಿಯೆ ಬಂತು, ಎಲ್ಲರೂ ಅಬ್ದುಲ್ ಕರೀಂನನ್ನು ಪತ್ತೆ ಮಾಡಬೇಕೆಂದು ಹಠ ತೊಟ್ರು. ಕೊನೆಗೆ ಅಬ್ದುಲ್ ಅಲ್ ಖತಾನಿ ಎಂಬಾತ ರಿಯಾದ್ ನಲ್ಲಿದ್ದ ಕರೀಂನನ್ನು ಪತ್ತೆ ಮಾಡಿದ್ದ. ಅವನಿಗೆ ದುಬಾರಿ ಉಡುಗೊರೆಗಳನ್ನು ನೀಡಿದ್ದಾನೆ. ಬಾಂಗ್ಲಾದೇಶಕ್ಕೆ ಹೋಗಿ ಬರಲು ಟಿಕೆಟ್, ಒಂದು ಐಫೋನ್ 7, ಒಂದು ಸ್ಯಾಮ್ ಸಂಗ್ ಗ್ಯಾಲಕ್ಸಿ ಮೊಬೈಲ್ ಹಾಗೂ ಚಿನ್ನಾಭರಣ ಕೂಡ ಕರೀಂಗೆ ಉಡುಗೊರೆಯಾಗಿ ದೊರೆತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...