alex Certify
ಕನ್ನಡ ದುನಿಯಾ       Mobile App
       

Kannada Duniya

ಬದಲಾಯ್ತು ಬಂಗಾರದಂಗಡಿ ಮುಂದೆ ನಿಂತವನ ಲಕ್

f_1481190064

ಕೆಲವೊಂದು ವಸ್ತುಗಳನ್ನು ಖರೀದಿ ಮಾಡುವಷ್ಟು ಬಜೆಟ್ ಮನುಷ್ಯನ ಬಳಿ ಇರೋದಿಲ್ಲ. ಹಾಗಂತ ದುಬಾರಿ ವಸ್ತುಗಳನ್ನು ಆತ ನೋಡಬಾರದು ಎಂದೇನಿಲ್ಲ. ಸ್ವಚ್ಛತೆ ಕೆಲಸ ಮಾಡುವ ಕಾರ್ಮಿಕನೊಬ್ಬನ ಫೋಟೋ ವಿಶ್ವದಾದ್ಯಂತ ವೈರಲ್ ಆಗಿದೆ. ಬಂಗಾರದಂಗಡಿ ಮುಂದೆ ನಿಂತು ದುಬಾರಿ ಒಡವೆ ನೋಡಿದ ಫೋಟೋ ಆತನ ಲಕ್ ಬದಲಾಯಿಸಿದೆ.

ಸೌದಿ ಅರೇಬಿಯಾದ ನಿವಾಸಿ, ವಲಸೆ ಕಾರ್ಮಿಕ 65 ವರ್ಷದ ಅಬ್ದುಲ್ ಕರೀಂ ಎಂದಿನಂತೆ ಅಂಗಡಿ ಮುಂದಿನ ಜಾಗವನ್ನು ಸ್ವಚ್ಛಗೊಳಿಸುತ್ತಿದ್ದ. ಆಭರಣದಂಗಡಿ ಕ್ಲೀನ್ ಮಾಡುವ ವೇಳೆ ಗ್ಲಾಸ್ ಒಳಗಿದ್ದ ಆಭರಣಗಳನ್ನು ನೋಡಿದ್ದಾನೆ. ಇದರ ಫೋಟೋ ತೆಗೆದ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣಕ್ಕೆ ಆ ಫೋಟೋ ಅಪ್ ಲೋಡ್ ಮಾಡಿದ್ದಾನೆ. ಜೊತೆಗೆ ಈತ ಆಭರಣ ನೋಡಲಷ್ಟೇ ಸಾಧ್ಯ ಎಂದು ಬರೆದಿದ್ದಾನೆ.

ಫೋಟೋಗ್ರಾಫರ್ ಮಾತಿಗೆ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಫೋಟೋ, ಅಂಗಡಿ ಮಾಲೀಕನ ಕೈಗೂ ಸಿಕ್ಕಿದೆ. ತಕ್ಷಣ ಅಬ್ದುಲ್ ನನ್ನು ಕರೆದ ಅಂಗಡಿ ಮಾಲೀಕ ಆಭರಣವೊಂದನ್ನು ಉಡುಗೊರೆಯಾಗಿ ನೀಡಿದ್ದಾನೆ. ಜೊತೆಗೆ ಅನೇಕರು ಐಫೋನ್ 7 ಹಾಗೂ ಹಣವನ್ನು ನೀಡಿದ್ದಾರೆ. ಆತ ಬಾಂಗ್ಲಾದೇಶಕ್ಕೆ ವಾಪಸ್ ಹೋಗಿ ತನ್ನ ಕುಟುಂಬದವರ ಜೊತೆ ವಾಸವಾಗಲಿ ಎನ್ನುವುದು ಇವರೆಲ್ಲರ ಆಸೆಯಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...