alex Certify
ಕನ್ನಡ ದುನಿಯಾ       Mobile App
       

Kannada Duniya

ಲಂಡನ್ ನಲ್ಲೂ ಶುರುವಾಗಿದೆ ಕಾಶ್ಮೀರಕ್ಕಾಗಿ ಸಂಘರ್ಷ

ಲಂಡನ್ ನಲ್ಲೂ ಕಾಶ್ಮೀರ ವಿಚಾರಕ್ಕೆ ನಿನ್ನೆ ಘರ್ಷಣೆ ನಡೆದಿದೆ. ಪಾಕಿಸ್ತಾನದ ಪರವಾಗಿರುವ ಲಾರ್ಡ್ ನಜೀರ್ ಅಹ್ಮದ್ ಎಂಬಾತ ಕಾಶ್ಮೀರ ಮತ್ತು ಖಲಿಸ್ತಾನಕ್ಕೆ ಸ್ವಾತಂತ್ರ್ಯ ಬೇಕೆಂದು ಆಗ್ರಹಿಸಿ ಭಾರತದ ಗಣರಾಜ್ಯೋತ್ಸವವನ್ನು ಕರಾಳ ದಿನವಾಗಿ ಆಚರಿಸೋದಾಗಿ ಹೇಳಿದ್ದ.

ಸೆಂಟ್ರಲ್ ಲಂಡನ್ ನಲ್ಲಿರೋ ಭಾರತೀಯ ರಾಯಭಾರ ಕಚೇರಿ ಎದುರು ತನ್ನ ಬೆಂಬಲಿಗರೊಂದಿಗೆ ಪ್ರತಿಭಟನೆ ಶುರು ಮಾಡಿದ್ದ. ಈ ವೇಳೆ ಲಂಡನ್ ನಲ್ಲಿರೋ ಭಾರತೀಯರು ಹಾಗೂ ಕೆಲವು ಬ್ರಿಟಿಷ್ ಗುಂಪುಗಳು ನಜೀರ್ ಅಹ್ಮದ್ ಕ್ರಮವನ್ನು ವಿರೋಧಿಸಿವೆ.

ಲಂಡನ್ ನಲ್ಲಿದ್ದುಕೊಂಡು ಪಾಕಿಸ್ತಾನದ ಪರ ನಿಂತಿರೋ ನಜೀರ್ ವಿರುದ್ಧ ಪ್ರತಿಭಟನೆಗಳು ನಡೆದಿವೆ. ಭಯೋತ್ಪಾದನೆ, ಕದನ ವಿರಾಮ ಉಲ್ಲಂಘನೆ ಮೂಲಕ ಕಾಲು ಕೆರೆದುಕೊಂಡು ಜಗಳಕ್ಕೆ ಬರ್ತಿರೋ ಪಾಕಿಸ್ತಾನದ ಪರ ಹೊರಟಿರೋ ನಜೀರ್ ವಿರುದ್ಧ ಸಾಮಾಜಿಕ ತಾಣಗಳಲ್ಲೂ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...